ಸರ್ಕಾರಿ ಭೂಮಿ ಒತ್ತುವರಿ ಆರೋಪ: ನಟ ಪ್ರಕಾಶ್ ರಾಜ್ ಗೆ ನೋಟಿಸ್

ಬುಧವಾರ, 30 ಆಗಸ್ಟ್ 2023 (09:46 IST)
ಚೆನ್ನೈ: ಬಹುಬಾಷಾ ನಟ ಪ್ರಕಾಶ್ ರಾಜ್ ಈಗ ಭೂ ಕಬಳಿಕೆ ಆರೋಪಕ್ಕೆ ಒಳಗಾಗಿದ್ದಾರೆ. ಸರಕಾರೀ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿದ ಆರೋಪಕ್ಕೆ ಗುರಿಯಾಗಿದ್ದಾರೆ.

ಕೊಡೈಕೆನಾಲ್ ನಲ್ಲಿ ಬಂಗಲೆ ನಿರ್ಮಿಸಲು ಅಕ್ರಮವಾಗಿ ಸರಕಾರೀ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ಆರೋಪದಲ್ಲಿ ಪ್ರಕಾಶ್ ರಾಜ್ ಮತ್ತು ನಟ ಬಾಬಿ ಸಿಂಹಗೂ ಸ್ಥಳೀಯ ಆಡಳಿತ ನೋಟಿಸ್ ನೀಡಿದೆ.

ಪಂಚಾಯತಿಯಿಂದ ಅನುಮತಿ ಪಡೆಯದೇ ಭಾರತೀಪುರಂ ಅಣ್ಣಾನಗರ ಗ್ರಾಮದಲ್ಲಿ ಬಂಗಲೆ ನಿರ್ಮಿಸಿದ್ದಾರೆ. ಇಬ್ಬರೂ ನಟರೂ ಸರಕಾರೀ ಜಮೀನು ಒತ್ತುವರಿ ಮಾಡಿ ತಮ್ಮ ಬಂಗಲೆಗೆ ರಸ್ತೆ ನಿರ್ಮಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ