ತಮಿಳುನಾಡಿನಲ್ಲೂ ಕನ್ನಡ ಸಿನಿಮಾಗಳಿಗೆ ತಡೆ ಬೆದರಿಕೆ
ಇದರ ಬೆನ್ನಲ್ಲೇ ಈಗ ತಮಿಳುನಾಡಿನಲ್ಲಿ ಕನ್ನಡ ಸಿನಿಮಾಗಳಿಗೆ ತಡೆ ಒಡ್ಡುತ್ತೇವೆ ಎಂದು ಎನ್ ಟಿಕೆ ಸಂಘಟನೆ ಬೆದರಿಕೆ ಹಾಕಿದೆ. ತಮಿಳಿನಲ್ಲೂ ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತವೆ. ನೀವು ತಮಿಳು ಸಿನಿಮಾಗಳಿಗೆ ಅಡ್ಡಿಪಡಿಸಿದರೆ ನಾವೂ ತಮಿಳುನಾಡಿನಲ್ಲಿ ಒಂದೇ ಒಂದು ಕನ್ನಡ ಸಿನಿಮಾ ಬಿಡುಗಡೆಯಾಗದಂತೆ ತಡೆಯಬಲ್ಲೆವು ಎಂದು ಸಂಘಟನೆ ಎಚ್ಚರಿಕೆ ನೀಡಿದೆ.
ಇದೇ ತಿಂಗಳು ಶಿವರಾಜ್ ಕುಮಾರ್ ನಾಯಕರಾಗಿರುವ ಘೋಸ್ಟ್ ಸಿನಿಮಾ ತಮಿಳಿನಲ್ಲೂ ಬಿಡುಗಡೆಯಾಗುತ್ತಿದೆ. ಇದೀಗ ತಮಿಳು ಸಂಘಟನೆಗಳ ಬೆದರಿಕೆ ಹಿನ್ನಲೆಯಲ್ಲಿ ಘೋಸ್ಟ್ ಸಿನಿಮಾಗೂ ತೊಂದರೆಯಾಗಬಹುದು ಎನ್ನಲಾಗಿದೆ.