ಮಗಳ ನಾಮಕರಣ ಶಾಸ್ತ್ರ ನೆರವೇರಿಸಿದ ಧ್ರುವ ಸರ್ಜಾ ದಂಪತಿ

ಶನಿವಾರ, 30 ಸೆಪ್ಟಂಬರ್ 2023 (08:40 IST)
Photo Courtesy: Instagram
ಬೆಂಗಳೂರು: ಇತ್ತೀಚೆಗಷ್ಟೇ ಗಂಡು ಮಗುವಿಗೆ ತಂದೆಯಾಗಿದ್ದ ನಟ ಧ್ರುವ ಸರ್ಜಾ ಇದೀಗ ತಮ್ಮ ಮಗಳ ನಾಮಕರಣ ಶಾಸ್ತ್ರ ನೆರವೇರಿಸಿದ್ದಾರೆ.

ನಿನ್ನೆ ಕಾವೇರಿ ವಿವಾದದ ವಿಚಾರವಾಗಿ ಸ್ಯಾಂಡಲ್ ವುಡ್ ಕಲಾವಿದರೊಂದಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರ ಹೊರತಾಗಿಯೂ ತಮ್ಮ ಮನೆಯಲ್ಲಿ ಶಾಸ್ತ್ರ ನೆರವೇರಿಸಲು ಧ‍್ರುವ ಮರೆತಿಲ್ಲ. ಮನೆಯಲ್ಲೇ ಸರಳವಾಗಿ ನಾಮಕರಣ ಶಾಸ್ತ್ರ ನೆರವೇರಿದೆ. ಇನ್ನೂ ಧ್ರುವ ತಮ್ಮ ಮಗಳ ಹೆಸರನ್ನು ರಿವೀಲ್ ಮಾಡಿಲ್ಲ.

ಸೆಪ್ಟೆಂಬರ್ 18 ರಂದು ಗಣೇಶ ಹಬ್ಬದ ದಿನ ಧ್ರುವ ಪತ್ನಿ ಪ್ರೇರಣಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದಕ್ಕೆ ಮೊದಲು ದಂಪತಿಗೆ ಓರ್ವ ಹೆಣ್ಣು ಮಗಳಿದ್ದಾಳೆ. ಕಳೆದ ವರ್ಷ ಅಕ್ಟೋಬರ್ 2 ರಂದು ಮಗಳು ಜನಿಸಿದ್ದಳು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ