ಶಿವಣ್ಣ ಘೋಸ್ಟ್ ಟ್ರೈಲರ್ ಇಂದು ಲಾಂಚ್: ಸೌತ್ ಸ್ಟಾರ್ ಗಳ ಸಾಥ್
ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಮಲಯಾಳಂನಲ್ಲೂ ಈ ಸಿನಿಮಾ ಬಿಡುಗಡೆಯಾಗುತ್ತಿದೆ. ಇಂದು ಬೆಳಿಗ್ಗೆ 11 ಗಂಟೆಗೆ ಟ್ರೈಲರ್ ಲಾಂಚ್ ಆಗಲಿದೆ.
ಟ್ರೈಲರ್ ಲಾಂಚ್ ಗೆ ತೆಲುಗು, ತಮಿಳು, ಮಲಯಾಳಂ ಭಾಷೆಯ ದಿಗ್ಗಜರು ಸಾಥ್ ನೀಡಲಿದ್ದಾರೆ. ತೆಲುಗಿನಲ್ಲಿ ನಿರ್ದೇಶಕ ರಾಜಮೌಳಿ, ತಮಿಳಿನಲ್ಲಿ ನಟ ಧನುಷ್, ಮಲಯಾಳಂ ಟ್ರೈಲರ್ ನ್ನು ನಟ ಪೃಥ್ವಿರಾಜ್ ಸುಕುಮಾರನ್ ಬಿಡುಗಡೆ ಮಾಡಲಿದ್ದಾರೆ. ಈ ಸಿನಿಮಾ ಅಕ್ಟೋಬರ್ 19 ರಂದು ಥಿಯೇಟರ್ ನಲ್ಲಿ ಬಿಡುಗಡೆಯಾಗುತ್ತಿದೆ.