`ವಿಕ್ಟರಿ 2′ ಸಿನಿಮಾದಲ್ಲಿ ಶರಣ್ ಹಾಗೂ ರವಿಶಂಕರ್ ಸೀರೆಯನ್ನುಟ್ಟ ಹೆಣ್ಣಿನ ಪಾತ್ರದ ಫೋಟೋಗಳು ಬಿಡುಗಡೆಯಾಗಿದ್ದು, ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. `ವಿಕ್ಟರಿ 2′ ಚಿತ್ರದಲ್ಲಿ ಶರಣ್ ಮತ್ತು ರವಿಶಂಕರ್ ಮಹಿಳೆಯ ವೇಷ ಧರಿಸಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.
2013 ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ `ವಿಕ್ಟರ್` ಚಿತ್ರದ ಸೀಕ್ವೆಲ್ ಆಗಿರುವ `ವಿಕ್ಟರಿ 2′ ಸಿನಿಮಾವನ್ನು ಅಲೆಮಾರಿ ಸಂತು(ಹರಿ ಸಂತೋಷ್) ನಿರ್ದೇಶಿಸಿದ್ದಾರೆ. ಈ ಸಿನಿಮಾದ ಹಾಡಿನ ಶೂಟಿಂಗ್ ರಷ್ಯಾದಲ್ಲಿ ನಡೆದಿದ್ದು, 'ಪ್ಲೀಸ್ ಟ್ರಸ್ಟು, ನಾನು ಚೀಪ್ ಅಂಡ್ ಬೆಸ್ಟು' ಹಾಡಿಗೆ ಶರಣ್ ಮತ್ತು ಅಸ್ಮಿತಾ ಸೂದ್ ಹೆಜ್ಜೆ ಹಾಕಿದ್ದಾರೆ. ಶರಣ್‍ಗೆ ನಾಯಕಿಯಾಗಿ ಅಪೂರ್ವ, ಅಸ್ಮಿತಾ ಸೂದ್ ಜೊತೆಯಾಗಿದ್ದು, ರವಿಶಂಕರ್, ಸಾಧುಕೋಕಿಲಾ, ತಬಲಾ ನಾಣಿ, ನಾಸೀನ್, ಅವಿನಾಶ್, ಮಿತ್ರಾ, ಕಲ್ಯಾಣಿ, ಅರಸು ಮತ್ತು ಸಿದ್ದಿ ಸೇರಿದಂತೆ ದೊಡ್ಡ ತಾರಾಗಣವನ್ನು ಚಿತ್ರ ಹೊಂದಿದೆ.