ಮಧ್ಯಂತರ ಜಾಮೀನು ಮುಗಿಯುವ ಕೊನೇ ಕ್ಷಣದಲ್ಲಿ ದರ್ಶನ್ ಗೆ ಆಪರೇಷನ್

Sampriya

ಶನಿವಾರ, 30 ನವೆಂಬರ್ 2024 (17:13 IST)
ಬೆಂಗಳೂರು: ಹೈಕೋರ್ಟ್ ನೀಡಿದ ಮಧ್ಯಂತರ ಜಾಮೀನು ಮುಗಿಯಲು ಒಂದು ವಾರ ಬಾಕಿಯಿರುವಾಗ ನಟ ದರ್ಶನ್ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕೆಂದು ತಮ್ಮ ನಿರ್ಧಾರವನ್ನು ದಿಢೀರ್ ಬದಲಾವಣೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ.

ಬಳ್ಳಾರಿ ಜೈಲಿನಲ್ಲಿ ತೀವ್ರವಾದ ಬೆನ್ನುನೋವಿನಿಂದ ಬಳಲುತ್ತಿದ್ದ ದರ್ಶನ್ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕೆಂದು ಮಧ್ಯಂತರ ಜಾಮೀನು ಅಡಿಯಲ್ಲಿ ಬೆಂಗಳೂರಿಗೆ ಬಂದಿದ್ದರು. ಆದರೆ ಜಾಮೀನು ಸಿಕ್ಕಿ 5 ವಾರಗಳಾದರು ದರ್ಶನ್ ಇದುವರೆಗೆ ಶಸ್ತ್ರಚಿಕಿತ್ಸೆಗೆ ಮುಂದಾಗಿಲ್ಲ. ಇನ್ನೂ ಕೆಲವರು ದರ್ಶನ್ ಕಾಲಹರಣ ಮಾಡುತ್ತಿದ್ದಾರೆ. ಮಧ್ಯಂತರ ಜಾಮೀನು ಮುಗಿಯುವ ವೇಳೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿ ಜೈಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಪ್ಲ್ಯಾನ್ ಮಾಡಿದ್ದಾರೆಂಬ ಆರೋಪವು ವ್ಯಕ್ತವಾಗಿತ್ತು.

ಇನ್ನೂ ದರ್ಶನ್‌ಗೆ ಶಸ್ತ್ರಚಿಕಿತ್ಸೆ ಆಗದಿರಲು ಕಾರಣ ಅವರ ರಕ್ತದೊತ್ತಡ ಎನ್ನಲಾಗಿದೆ. ಬಿಪಿ ಕಂಟ್ರೋಲ್‌ಗೆ ಬಾರದೇ ಇರೋ ಕಾರಣದಿಂದಾಗಿ ಇನ್ನೂ ಸರ್ಜರಿ ಮಾಡಲಾಗಿಲ್ಲವಂತೆ. ಇದೀಗ ದರ್ಶನ್ ಸರ್ಜರಿಗೆ ಒಪ್ಪಿಗೆ ಸೂಚಿಸಿರುವುದು, ಈ ಹಿಂದೆಲ್ಲ ನೀಡಿದ ಕಾರಣ ಸುಳ್ಳು ಎಂಬ ಸಂಶಯವನ್ನು ಮೂಡಿಸಿದೆ.

ಈಗಾಗಲೇ ನುರಿತ ವೈದ್ಯರನ್ನೂ ದರ್ಶನ್ ಕುಟುಂಬ ಸಂಪರ್ಕ ಮಾಡಿದ್ದಾರಂತೆ. ಜಾಮೀನು ಅವಧಿ ಉಳಿದಿರೋದು ಕೇವಲ 11 ದಿನಗಳು ಮಾತ್ರ. ಅಷ್ಟರಲ್ಲಿ ಸರ್ಜರಿ ಕುರಿತು ಮಾನ್ಯ ನ್ಯಾಯಾಲಯಕ್ಕೆ ಮತ್ತೊಂದು ಮನವಿ ಸಲ್ಲಿಸಲಾಗತ್ತೆ ಅನ್ನೋದು ಸದ್ಯಕ್ಕಿರೋ ಮಾಹಿತಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ