ರೇಣುಕಾಸ್ವಾಮಿ ಕಿಡ್ನ್ಯಾಪ್ ಆಗಿಯೇ ಇಲ್ಲ: ದರ್ಶನ್ ಪರ ವಕೀಲ ಸಿವಿ ನಾಗೇಶ್ ವಾದ ವೈಖರಿ

Krishnaveni K

ಮಂಗಳವಾರ, 26 ನವೆಂಬರ್ 2024 (14:08 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಇಂದು ನಡೆದಿದೆ. ಈ ವೇಳೆ ದರ್ಶನ್ ಪರ ವಕೀಲ ಸಿವಿ ನಾಗೇಶ್ ಖಡಕ್ ವಾದ ಮಂಡಿಸಿದ್ದು ರೇಣುಕಾಸ್ವಾಮಿಯೇ ಕಿಡ್ನ್ಯಾಪ್ ಆಗಿಯೇ ಇರಲಿಲ್ಲ ಎಂದಿದ್ದಾರೆ.

ಆರೋಪಿ ದರ್ಶನ್ ಸ್ನೇಹಿತೆ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡುತ್ತಿದ್ದನೆಂಬ ಕಾರಣಕ್ಕೆ ಚಿತ್ರದುರ್ಗದಿಂದ ತನ್ನ ಅಭಿಮಾನಿ ಸಂಘದವರ ಸಹಾಯದಿಂದ ರೇಣುಕಾಸ್ವಾಮಿಯನ್ನು ದರ್ಶನ್ ಪಟ್ಟಣಗೆರೆ ಶೆಡ್ ಕರೆದೊಯ್ದಿದ್ದರು. ಪ್ರಕರಣದಲ್ಲಿ ದರ್ಶನ್ ವಿರುದ್ಧ ಕಿಡ್ನ್ಯಾಪ್ ಕೇಸ್ ಕೂಡಾ ದಾಖಲಾಗಿದೆ.

ಆದರೆ ಇಂದು ಜಾಮೀನು ಅರ್ಜಿ ವಿಚಾರಣೆ ವೇಳೆ ಸಿವಿ ನಾಗೇಶ್ ಇಲ್ಲಿ ಕಿಡ್ನ್ಯಾಪ್ ಆಗಿಯೇ ಇರಲಿಲ್ಲ ಎಂದಿದ್ದಾರೆ. ಅದಕ್ಕೆ ರೇಣುಕಾಸ್ವಾಮಿ ತಂದೆ ಕಾಶೀನಾಥಯ್ಯ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ. ರೇಣುಕಾಸ್ವಾಮಿ ತಂದೆ ಕಾಶೀನಾಥಯ್ಯ ತಮ್ಮ ಮಗ ರೇಣುಕಾಸ್ವಾಮಿ ನಾಲ್ವರು ಸ್ನೇಹಿತರೊಂದಿಗೆ ಊಟಕ್ಕೆ ಹೋಗಿದ್ದು ಸಂಜೆ ಬರ್ತೀನಿ ಎಂದಿದ್ದ ಎಂದು ಹೇಳಿಕೆ ನೀಡಿದ್ದನ್ನು ಉಲ್ಲೇಖಿಸಿದ್ದಾರೆ.

ಬಲವಂತವಾಗಿ ಕರೆದೊಯ್ದರೆ ಮಾತ್ರ ಕಿಡ್ನ್ಯಾಪ್ ಆಗುತ್ತದೆ. ಆದರೆ ಇಲ್ಲಿ ರೇಣುಕಾಸ್ವಾಮಿಗೆ ಯಾವುದೇ ಒತ್ತಡ ಹಾಕಿ ಕರೆತಂದಿರಲಿಲ್ಲ ಎಂದು ಸಿವಿ ನಾಗೇಶ್ ವಾದ ಮಂಡಿಸಿದ್ದಾರೆ. ರೇಣುಕಾಸ್ವಾಮಿ, ಪವಿತ್ರಾ ಗೌಡಗೆ ಮಾಡಿದ್ದ ಅಶ್ಲೀಲ ಸಂದೇಶಗಳನ್ನು ಜಡ್ಜ್ ಗೆ ಸಲ್ಲಿಸಿದ ಸಿವಿ ನಾಗೇಶ್, ಸರಸ್ವತಿ, ಶಾರದೆ ಇರುವ ನಾಡಿನಲ್ಲಿ ಇಂಥಾ ಕೆಟ್ಟ ಮೆಸೇಜ್ ಮಾಡಿದ್ದಾರೆ. ಇದು ಆತ ಒಬ್ಬರಿಗೆ ಮಾಡಿರುವುದಲ್ಲ. ಈ ರೀತಿ ಹಲವು ಮಹಿಳೆಯರಿಗೆ ಮಾಡಿದ್ದಾನೆ. ಇದು ಸ್ಯಾಂಪಲ್ ಅಷ್ಟೇ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ