ಮಣ್ಣ ಘಮಲಿನಿಂದ ಎದ್ದುಬಂದ ಪಡ್ಡೆಹುಲಿ!

ಮಂಗಳವಾರ, 9 ಏಪ್ರಿಲ್ 2019 (13:07 IST)
ಈಗ ಎತ್ತ ನೋಡಿದರೂ ಪಡ್ಡೆಹುಲಿಯದ್ದೇ ಅಬ್ಬರ. ಸಾಮಾನ್ಯವಾಗಿ ಸ್ಟಾರ್ ಸಿನಿಮಾಗಳು ಬಿಡುಗಡೆಗೂ ಮುನ್ನ ಎಲ್ಲಡೆ ಸಂಚಲನ ಸೃಷ್ಟಿಸೋದು ಮಾಮೂಲು ವಿದ್ಯಮಾನ. ಆದರೆ ಹೊಸಾ ಹುಡುಗ ಹೀರೋ ಆಗಿ ಪರಿಚಯವಾಗುವ ಮೊದಲ ಚಿತ್ರದಲ್ಲಿಯೇ ಈ ಪಾಟಿ ಅಬ್ಬರಿಸೋದು ಕನ್ನಡದ ಮಟ್ಟಿಗೆ ಬಲು ಅಪರೂಪದ ಬೆಳವಣಿಗೆ. ಅಂಥಾದ್ದೊಂದು ಅಪರೂಪದ ಪಲ್ಲಟಗಳ ಜೊತೆಯೇ ಪಡ್ಡೆಹುಲಿ ಚಿತ್ರ ತೆರೆ ಕಾಣಲು ಅಣಿಯಾಗಿದೆ.
ತೇಜಸ್ವಿನಿ ಎಂಟರ್ ಪ್ರೈಸಸ್ ಲಾಂಛನದಡಿಯಲ್ಲಿ ಎಂ ರಮೇಶ್ ರೆಡ್ಡಿಯವರು ನಿರ್ಮಾಣ ಮಾಡಿರುವ ಚಿತ್ರ ಪಡ್ಡೆಹುಲಿ. ಇದನ್ನು ರಾಜಾಹುಲಿ ಖ್ಯಾತಿಯ ಗುರುದೇಶಪಾಂಡೆ ನಿರ್ದೇಶನ ಮಾಡಿದ್ದಾರೆ. ಪಡ್ಡೆಹುಲಿಯ ಬಗ್ಗೆ ಈವತ್ತಿಗೆ ಇಂಥಾದ್ದೊಂದು ಸಂಚನ ಚಾಲ್ತಿಯಲ್ಲಿದೆಯೆಂದರೆ ಅದಕ್ಕೆ ಗುರುದೇಶಪಾಂಡೆಯವರ ರಾಜಾಹುಲಿ ಫೇಮೂ ಕೂಡಾ ಪ್ರಧಾನ ಕಾರಣ ಅನ್ನೋದರಲ್ಲಿ ಎರಡು ಮಾತಿಲ್ಲ.
 
ಪಡ್ಡೆಹುಲಿ ಚಿತ್ರದ ಮೂಲಕ ನಿರ್ಮಾಪಕ ಕೆ ಮಂಜು ಅವರ ಪುತ್ರ ಶ್ರೇಯಸ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಶ್ರೇಯಸ್ ಅವರನ್ನು ನಿರ್ದೇಶಕ ಗುರುದೇಶಪಾಂಡೆ ಪಕ್ಕಾ ಮಣ್ಣಿನ ಸೊಗಡಿನ ಕಥೆಯೊಂದರ ಮೂಲಕವೇ ಅದ್ದೂರಿಯಾಗಿ ಲಾಂಚ್ ಮಾಡಲು ಮುಂದಾಗಿದ್ದಾರೆ. ರಾಜಾಹುಲಿ ಸೇರಿದಂತೆ ನಿರ್ದೇಶನ ಮಾಡಿದ ಎಲ್ಲ ಚಿತ್ರಗಳಲ್ಲಿಯೂ ಮಣ್ಣಿನ ಘಮಲಿನ ಕಥೆ  ಹೇಳಿದ್ದವರು ಗುರುದೇಶಪಾಂಡೆ. ಈ ಕಾರಣದಿಂದಲೇ ಈ ಪಡ್ಡೆಹುಲಿ ಕೂಡಾ ಅಂಥಾದ್ದೇ ಮಣ್ಣಿನ ಘಮಲಿನಿಂದ ಎದ್ದು ಬಂದಂತೆ ಪ್ರೇಕ್ಷಕರಿಗೆ ಭಾಸವಾಗುವಂತೆ ಕಟ್ಟಿಕೊಟ್ಟಿದ್ದಾರಂತೆ.
 
ಮಧ್ಯಮವರ್ಗದ ಹುಡುಗನೊಬ್ಬನ ಆತ್ಮಕಥೆಯಂತಿರೋ ಈ ಚಿತ್ರ ಪಕ್ಕಾ ಎಂಟರ್ಟೈವನ್ಮೆಂಟ್ ಪ್ಯಾಕೇಜ್. ಫ್ಯಾಮಿಲಿ ಸಮೇತ ಕೂತು ನೋಡಬಹುದಾದ ಈ ಚಿತ್ರದಲ್ಲಿ ಫ್ಯಾಮಿಲಿ ಸೆಂಟಿಮೆಂಟ್, ಲವ್, ಕಾಮಿಡಿ, ಮಾಸ್ ಸನ್ನಿವೇಶಗಳು ಸೇರಿದಂತೆ ಎಲ್ಲ ಅಂಶಗಳೂ ಇವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ