ಲೈಂಗಿಕ ಜೀವನಕ್ಕೆ ಮಾರಕವಾಗಿದೆ ಸಂಧಿವಾತ ಸಮಸ್ಯೆ

ಮಂಗಳವಾರ, 9 ಏಪ್ರಿಲ್ 2019 (09:57 IST)
ಬೆಂಗಳೂರು : ಮಹಿಳೆ ಅಥವಾ ಪುರುಷರಿಗೆ ಕಾಡುವ ಸಂಧಿವಾತ ಲೈಂಗಿಕ ಜೀವನದ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ ಎಂದು ಇತ್ತೀಚಿಗೆ ನಡೆದ ಸಂಶೋಧನೆಯೊಂದರಿಂದ ತಿಳಿದುಬಂದಿದೆ.

ಆರ್ಥರೈಟೀಸ್ ಕೇರ್ ಆಯಂಡ್ ರಿಸರ್ಚ್ ವಿಶ್ಲೇಷಣೆಯಲ್ಲಿ 55 ಸಂಶೋಧನೆ ವರದಿಯನ್ನು ಪರಿಗಣಿಸಲಾಗಿದ್ದು, ಇದರಲ್ಲಿ ಬೇರೆಯವರಿಗೆ ಹೋಲಿಸಿದರೆ ಸಂಧಿವಾತದಿಂದ ಬಳಲುವವರಿಗೆ ಲೈಂಗಿಕ ರೋಗದ ಸಮಸ್ಯೆ ಹೆಚ್ಚಿರುತ್ತದೆಯಂತೆ.

 

ಹಾಗೇ ಪುರುಷ ಅಥವಾ ಮಹಿಳೆ ಇಬ್ಬರಲ್ಲಿ ಒಬ್ಬರಿಗೆ ಅನಾರೋಗ್ಯ, ನೋವು, ಬಳಲಿಕೆಯಿದ್ದರೆ ಅದು ಅವರ ಲೈಂಗಿಕ ಜೀವನ ಹಾಗೂ ಆಸಕ್ತಿ ಮೇಲೆ ಪ್ರಭಾವ ಬೀರುತ್ತದೆ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ. ಸಂಧಿವಾತ, ದಂಪತಿ ಸಂಭೋಗದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದ್ರ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಯಬೇಕೆಂದು ಸಂಶೋಧಕರು ಹೇಳಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ