ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಕೊರೋನಾ ಹಾವಳಿ

ಮಂಗಳವಾರ, 4 ಜನವರಿ 2022 (11:27 IST)
ಬೆಂಗಳೂರು: ಕೊರೋನಾ ಪ್ರಕರಣ ದಿನೇ ದಿನೇ ಹೆಚ್ಚುತ್ತಿರುವುದು ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಪಕರ ಚಿಂತೆ ಹೆಚ್ಚಿಸಿದೆ.
 

ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಬಿಡುಗಡೆ ಮಾಡುವಾಗ ಎಲ್ಲಾ ರಾಜ್ಯಗಳ ಚಿತ್ರಮಂದಿರಗಳ ನಿರ್ಬಂಧಗಳನ್ನು ನೋಡಬೇಕಾಗುತ್ತದೆ. ಈಗಾಗಲೇ ಹಲವು ರಾಜ್ಯಗಳು ಚಿತ್ರಮಂದಿರಗಳಿಗೆ ನಿರ್ಬಂಧ ವಿಧಿಸಿದೆ.

ಇದರಿಂದಾಗಿಯೇ ಆರ್ ಆರ್ ಆರ್ ಸಿನಿಮಾ ರಿಲೀಸ್ ದಿನಾಂಕ ಮುಂದೂಡಿಕೆಯಾಯ್ತು. ಇದು ನಿರ್ಮಾಪಕರಿಗೆ ನಷ್ಟವುಂಟು ಮಾಡಿದೆ. ಇದೇ ರೀತಿ ಕನ್ನಡದಲ್ಲೂ ವಿಕ್ರಾಂತ್ ರೋಣ ಇದೇ ಭಯದಲ್ಲಿದೆ. ಕೇವಲ ವಿಕ್ರಾಂತ್ ರೋಣ ಮಾತ್ರವಲ್ಲ, ಬಿಡುಗಡೆಗೆ ನಿಂತಿರುವ ಎಲ್ಲಾ ಪ್ಯಾನ್ ಇಂಡಿಯಾ ಸಿನಿಮಾಗಳದ್ದೂ ಇದೇ ಕತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ