ವೈ.ಎಸ್.ರಾಜಶೇಖರ್ ರೆಡ್ಡಿ ಜೀವನಕಥೆ ಆಧಾರಿತ ಯಾತ್ರೆ ಚಿತ್ರದ ಭಾಗ 2 ಬರಲಿದೆಯಾ?

ಬುಧವಾರ, 27 ಜನವರಿ 2021 (07:50 IST)
ಹೈದರಾಬಾದ್ : ದಿವಂಗತ ವೈ.ಎಸ್.ರಾಜಶೇಖರ್ ರೆಡ್ಡಿ ಅವರ ರಾಜಕೀಯ ಜೀವನವನ್ನು ಆಧರಿಸಿದ ಚಿತ್ರ ‘ಯಾತ್ರೆ’ ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸಿತ್ತು. ಮೆಗಾಸ್ಟಾರ್ ಮುಮ್ಮಟ್ಟಿ ಈ ಚಿತ್ರದಲ್ಲಿ ವೈಎಸ್ ಆರ್ ಪಾತ್ರವನ್ನು ಬಹಳ ಉತ್ತಮವಾಗಿ ನಿರ್ವಹಿಸಿದ್ದಾರೆ. ಈ ಚಿತ್ರವನ್ನು ಮಹಿ ವಿ.ರಾಘವ್ ನಿರ್ದೇಶಿಸಿದ್ದಾರೆ.

ಯಾತ್ರೆ ಚಿತ್ರದ ಬಳಿಕ ಇತ್ತೀಚೆಗೆ ವೈ.ಎಸ್.ರಾಜಶೇಖರ್ ರೆಡ್ಡಿ ಅವರ ಪುತ್ರ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರ ರಾಜಕೀಯ ಜೀವನದ ಬಗ್ಗೆ ಕುರಿತಾದ ‘ಯಾತ್ರೆ ಭಾಗ 2 ‘ ಚಿತ್ರ ಮಾಡಲಾಗುವುದು ಎಂಬ ವದಂತಿ ಕೇಳಿಬಂದಿತ್ತು. ಆದರೆ ಇದರಲ್ಲಿ ಯಾರು ನಟಿಸುತ್ತಾರೆ ಚರ್ಚೆಯ ನಡುವೆ ನಟ ಸೂರ್ಯ ನನ್ನು ಸಂಪರ್ಕಿಸಿದ್ದು, ಇದಕ್ಕೆ ಅವರು ಒಪ್ಪಿಕೊಂಡಿದ್ದರು ಎನ್ನಲಾಗಿತ್ತು.
ಆದರೆ ಇದೀಗ ಚಿತ್ರ ಆರಂಭ ವಿಳಂಬವಾಗಲಿದೆಯಂತೆ. ಯಾಕೆಂದರೆ ನಿರ್ದೇಶಕ ಮಹಿ ವಿ.ರಾಘವ್ ಮಲ್ಟಿಸ್ಟಾರ್  ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರಂತೆ. ಹಾಗಾಗಿ ಈ ಚಿತ್ರವನ್ನು ಮುಂದೂಡಲಾಗಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ