ಮಲಯಾಳ ಸಿನಿಮಾರಂಗದಲ್ಲಿ ಸದ್ದು ಮಾಡುತ್ತಿರುವ ಹೇಮಾ ಸಮಿತಿ ವರದಿ ಬೆನ್ನಲ್ಲೇ ಇದೀಗ ಕನ್ನಡ ಚಿತ್ರರಂಗದಲ್ಲೂ ಅಂತಹ ಸಮಿತಿಗೆ ಅಗ್ರಹ ಕೇಳಿಬಂದಿದೆ. ಈ ಹಿನ್ನೆಲೆ ಇಂದು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ನೇತೃತ್ವದಲ್ಲಿ ಸಭೆ ನಡೆಯಿತು. ಅದರಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಅವರು ಪಾಲ್ಗೊಂಡಿದ್ದರು.
ಹೇಮಾ ಸಮಿತಿ ವರದಿಯಿಂದ ಮಲಯಾಳಂ ಚಿತ್ರರಂಗದಲ್ಲಿ ಹೊಸ ಸಂಚಲವನ್ನು ಸೃಷ್ಟಿಯಾಗಿದೆ. ಇದರಿಂದ ಅನೇಕ ಲೈಂಗಿಕ ದೌರ್ಜನ್ಯ ದೂರುಗಳು ಹೊರಬಿದ್ದಿದ್ದು, ಸ್ಟಾರ್ ಡೈರೆಕ್ಟರ್ ಹಾಗೂ ನಟರ ವಿರುದ್ಧ ಆರೋಪಗಳು ಕೇಳಿಬರುತ್ತಿದೆ.
ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಮಾತನಾಡಿ, ಮಹಿಳೆಯ ಸಮಸ್ಯೆ ಮತ್ತು ರಕ್ಷಣೆಗಾಗಿ ಕನ್ನಡ ಚಿತ್ರರಂಗದಲ್ಲಿ ಪಾಶ್ ಕಮಿಟಿ ಮಾಡಲಾಗುತ್ತಿದೆ. ಕಾನೂನಿ ಅಡಿಯಲ್ಲಿ ಕಮಿಟಿ ಇರಲಿದೆ. ಅದೇ ರೀತಿಯಲ್ಲಿ ಸಮಿತಿ ರಚನೆಯಾಗಲಿದೆ. ನಟಿಯರು ಸಿನಿಮಾದಲ್ಲಿ ನಟಿಸಬೇಕು ಎಂದಾಗ 17 ಪಾಯಿಂಟ್ಸ್ ಇದೆ. ಯಾವ ಯಾವ ಫೆಸೆಲಿಟಿ ನೀಡಬೇಕು ಎಂಬುದರ ಉಲ್ಲೇಖ ಇದೆ. ಪಾಶ್ ಕಮಿಟಿ ಇರುತ್ತದೆ. ಸರ್ಕಾರದ ಗೆಜೆಟ್ನಲ್ಲಿ ಈ ಸಮಿತಿ ಬರುತ್ತದೆ. ದೂರು ಬಂದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಮಹಿಳೆಯರ ರಕ್ಷಣೆಗಾಗಿ ಸಮಿತಿ ರಚನೆಯಾಗಲೇ ಬೇಕು. ಅದನ್ನು ಯಾರು ಬೇಡ ಎಂದು ಹೇಳಲು ಆಗುವುದಿಲ್ಲ. ಈ ಸಮಿತಿಯ ಅಧ್ಯಕ್ಷೆ ಹಿರಿಯ ನಟಿಯಾಗಿರುತ್ತಾರೆ. ಅರ್ಧದಷ್ಟು ಸದಸ್ಯರು ಮಹಿಳೆಯರಾಗಬೇಕು. ಮಹಿಳೆಯರ ಪರ ಹೋರಾಡುವ ಒಬ್ಬರು ಈ ಸಮಿತಿಯಲ್ಲಿ ಇರಬೇಕು ಎಂದು ಮಾಹಿತಿ ನೀಡಿದರು.