ಬಿಹಾರ: ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯ ಮತ್ತು ಆತನ ಇಬ್ಬರು ಸಹಚರರು ಸಾಮೂಹಿಕ ಅತ್ಯಾಚಾರ ಎಸಗಲು ಯತ್ನಿಸಿದಾಗ ನರ್ಸ್ ಒಬ್ಬರು ಸರ್ಜಿಕಲ್ ಬ್ಲೇಡ್‌ನಿಂದ ಇರಿದ ಘಟನೆ ನಡೆದಿದೆ. ಬಿಹಾರದ ಸಮಸ್ತಿಪುರದಲ್ಲಿ ಈ ಘಟನೆ ನಡೆದಿದೆ. ಗಾಯಗೊಂಡಿರುವ ವೈದ್ಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಕರಣ ಸಂಬಂಧ ಪೊಲೀಸರು ಸಂಜಯ್ ಕುಮಾರ್ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬೇಗುಸರಾಯ್ ಜಿಲ್ಲೆಯ ಡಾ ಸಂಜಯ್ ಕುಮಾರ್ ಸಂಜು, ವೈಶಾಲಿ ಜಿಲ್ಲೆಯ ಸುನೀಲ್ ಕುಮಾರ್ ಗುಪ್ತಾ ಮತ್ತು ಮಾಂಗ್ರಾ ಪ್ರದೇಶದ ಅವಧೇಶ್ ಕುಮಾರ್ ಅತ್ಯಾಚಾರ ಎಸಗಲು ಯತ್ನಿಸಿದ ಆರೋಪಿಗಳು.
ಮೂವರು ಮದ್ಯ ಸೇವಿಸಿ, ಕುಡಿದ ಅಮಲಿನಲ್ಲಿ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದರು. ಸಂಜು ತನ್ನ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದಾಗ ಮಹಿಳೆ ಸರ್ಜಿಕಲ್ ಬ್ಲೇಡ್ ಹಿಡಿದು ಆತನ ಖಾಸಗಿ ಅಂಗವನ್ನು ಕತ್ತರಿಸಿದ್ದಾಳೆ.
ಬಳಿಕ ಆಕೆ ಆವರಣದಿಂದ ಪರಾರಿಯಾಗಿದ್ದಳು. ನಂತರ ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾಳೆ. ಎಸ್ಪಿ ವಿನಯ್ ತಿವಾರಿ ನೇತೃತ್ವದ ತಂಡ ಆಸ್ಪತ್ರೆಯಿಂದ ವೈದ್ಯರು ಮತ್ತು ಸಹಚರರನ್ನು ಬಂಧಿಸಿದ್ದಾರೆ.
ಆಸ್ಪತ್ರೆಯಲ್ಲಿ ರಕ್ತಸಿಕ್ತ ಬೆಡ್‌ಶೀಟ್‌ಗಳು, ಮೊಬೈಲ್ ಫೋನ್‌ಗಳು ಮತ್ತು ಮದ್ಯದ ಬಾಟಲಿಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ.