ಆರ್ ಆರ್ ಆರ್ ಚಿತ್ರದ ಶೂಟಿಂಗ್ ಸೆಟ್ ಗೆ ಆಗಮಿಸಿದ ಪವನ್ ಕಲ್ಯಾಣ್. ಕಾರಣವೇನು ಗೊತ್ತಾ?

ಸೋಮವಾರ, 22 ಫೆಬ್ರವರಿ 2021 (09:12 IST)
ಹೈದರಾಬಾದ್ : ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನದ ಸ್ಟಾರ್ ನಟರಾದ ಜೂನಿಯರ್ ಎನ್ ಟಿಆರ್ ಮತ್ತು ರಾಮ್ ಚರಣ್ ಅವರು ನಟಿಸಿದ ‘ಆರ್ ಆರ್ ಆರ್’ ಚಿತ್ರ ಅಕ್ಟೋಬರ್ 13ರಂದು ಬಿಡುಗಡೆಯಾಗಲಿದೆ. ಹೀಗಾಗಿ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.

ಇದೀಗ ಹೈದರಾಬಾದ್ ನಲ್ಲಿ ನಡೆಯುತ್ತಿದ್ದ ‘ಆರ್ ಆರ್ ಆರ್’ ಚಿತ್ರದ ಶೂಟಿಂಗ್ ಸೆಟ್ ಗೆ ವಿಶೇಷ ಅತಿಥಿಯೊಬ್ಬರು ಆಗಮಿಸಿದ್ದಾರೆ. ‘ಆರ್ ಆರ್ ಆರ್’ ಚಿತ್ರದಲ್ಲಿ ಜೂನಿಯರ್ ಎನ್ ಟಿಆರ್ ಆಕ್ಷನ್ ದೃಶ್ಯವನ್ನು ಶೂಟ್ ಮಾಡಲು ಹೈದರಾಬಾದ್ ನ ಅಲ್ಯೂಮಿನಿಯಂನ ಕಾರ್ಖಾನೆಯಲ್ಲಿ ಸೆಟ್ ಹಾಕಲಾಗಿದೆ. 

ಹಾಗೇ ಪವನ್ ಕಲ್ಯಾಣ ‘ಅಯ್ಯಪ್ಪ ನೂಮ್ ಕೊಶಿಯಲ್’ ಚಿತ್ರದ ರಿಮೇಕನಲ್ಲಿ ನಟಿಸುತ್ತಿದ್ದು. ಅದರ ಶೂಟಿಂಗ್ ಕೂಡ ಹೈದರಾಬಾದ್ ನ ಅಲ್ಯೂಮಿನಿಯಂನ ಕಾರ್ಖಾನೆಯಲ್ಲಿ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಪವನ್ ಕಲ್ಯಾಣ್ ಆರ್ ಆರ್ ಆರ್ ಸೆಟ್ ಗೆ ಭೇಟಿ ನೀಡಿ ರಾಜಮೌಳಿ ಅವರನ್ನು ಮಾತನಾಡಿಸಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ