ದಯವಿಟ್ಟು ಡೈಲಾಗ್ ಡೆಲಿವರಿ ಶೈಲಿ ಬದಲಾಯಿಸಿ, ಧ್ರುವ ಸರ್ಜಾಗೆ ಮಾರ್ಟಿನ್ ನೋಡಿದ ಪ್ರೇಕ್ಷಕರ ಮನವಿ

Sampriya

ಶನಿವಾರ, 12 ಅಕ್ಟೋಬರ್ 2024 (17:29 IST)
Photo Courtesy X
ಬೆಂಗಳೂರು: ಹಿಟ್ ಮೇಲೆ ಹಿಟ್ ಸಿನಿಮಾಗಳನ್ನು ನೀಡಿದ್ದ ಆ್ಯಕ್ಷನ್ ಫ್ರಿನ್ಸ್ ಧ್ರುವ ಸರ್ಜಾ ಅವರ ಮಾರ್ಟಿನ್ ಸಿನಿಮಾಕ್ಕೆ ನಿರಾಸೆ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 11 ಭಾಷೆಯಲ್ಲಿ ರಿಲೀಸ್ ಆದ ಮಾರ್ಟಿನ್ ಸಿನಿಮಾದ ಮೇಕಿಂಗ್‌ಗೆ ಪ್ರೇಕ್ಷಕರು ಮಿಶ್ರ ಪ್ರತಿಕ್ರಿಯೆ ತೋರಿಸುತ್ತಿದ್ದಾರೆ.

ಬಿಗ್‌ಬಜೆಟ್‌ನಲ್ಲಿ  ತಯಾರಾದ ಸಿನಿಮಾ ಇದುವರೆಗೆ 6.2 ಕೋಟಿ ಕಲೆಕ್ಷನ್ ಮಾಡಿದೆ. ಇನ್ನೂ ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ನೋಡಿದವರು ಅಸಮಾಧಾನ ಹೊರಹಾಕುತ್ತಿದ್ದಾರೆ.

ಧ್ರುವ ಸರ್ಜಾ ಅವರ ಅಭಿನಯದ ಬಹುನಿರೀಕ್ಷಿತ ಸಿನಿಮಾ ಇದಾಗಿದ್ದು, ಎಪಿ ಅರ್ಜುನ್ ಸರ್ಜಾ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾಗೆ ಉದಯ್ ಮೆಹ್ತಾ ಅವರು ಬಂಡವಾಳ ಹೂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ನೋಡಿದ ಮಂದಿ ಕರ್ನಾಟಕ ಚಿತ್ರರಂಗದ ಮರ್ಯಾದೆಯನ್ನು ದೇಶ ಮಟ್ಟದಲ್ಲಿ ಹರಾಜು ಹಾಕಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಬ್ಬರು ಈ ಬಗ್ಗೆ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಮಾರ್ಟಿನ್ ಸಿನಿಮಾ ನಿರಾಶಾದಾಯಕವಾಗಿದೆ.  ಮೊದಲಾರ್ಧದಲ್ಲಿ ಹೆಚ್ಚು ಕೆರಳಿಸಿದ ವಿಷಯವೆಂದರೆ ಧ್ರುವಸರ್ಜಾ ಅವರ ಎಕ್ಸ್‌ಪ್ರೆಸನ್ ಹಾಗೂ ಅವರ ಧ್ವನಿ. ಅನಗತ್ಯ ಫೈಟ್‌ಗಳು, ಭಯಂಕರ ಸಂಭಾಷಣೆಗಳು ಮತ್ತು ತರ್ಕಬದ್ಧವಲ್ಲದ ಸೀನ್‌ಗಳಿಂದ ಓವರ್‌ಲೋಡ್ ಆಗಿದೆ. ಕೊನೆಯಲ್ಲಿ, ಚಿತ್ರವು ಮನರಂಜನೆಯನ್ನು ನೀಡಲಿಲ್ಲ.  ಧ್ರುವ ಸರ್ಜಾ ಅವರಿಗೆ ನಾನು ಒಂದು ವಿಷಯ ಹೇಳಲು ಬಯಸುತ್ತೇನೆ.  ದಯವಿಟ್ಟು ನಿಮ್ಮ ಡೈಲಾಗ್ ಡೆಲಿವರಿ ಶೈಲಿಯನ್ನು ಬದಲಾಯಿಸಿ ಎಂದು ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ