ರಾಜಮೌಳಿ ವಿರುದ್ಧ ಹೈದ್ರಾಬಾದ್`ನಲ್ಲಿ ದೂರು ದಾಖಲು

ಮಂಗಳವಾರ, 2 ಮೇ 2017 (19:19 IST)
ವಿಶ್ವಾದ್ಯಂತ ಹಲವು ದಾಖಲೆಗಳನ್ನ ಮೆಟ್ಟಿ ನಿಂತು ಬಾಹುಬಲಿ-2 ಚಿತ್ರ ಮುನ್ನುಗ್ಗುತ್ತಿದೆ. ಈ ಮಧ್ಯೆ ಬಾಹುಬಲಿ-2 ಚಿತ್ರದ ನಿರ್ದೇಶಕ ಎಸ್.ಎಸ್. ರಾಜಮೌಳಿ ವಿರುದ್ಧ ಜಾತಿ ನಿಂದನೆ ದೂರು ದಾಖಲಾಗಿದೆ.

ಅರೆಕತಿಕ ಹೋರಾಟ ಸಮಿತಿ ರಾಜಮೌಳಿ ವಿರುದ್ಧ ಕತಿಕ ಸಮುದಾಯದ ಭಾವನೆಗಳಿಗೆ ಧಕ್ಕೆ ಮಾಡಿದ ಆರೋಪದಡಿ ದೂರು ದಾಖಲಿಸಿದೆ. ಬಾಹುಬಲಿ-2 ಚಿತ್ರದಲ್ಲಿ ಕಟ್ಟಪ್ಪ, ಕತಿಕ ಚೀಕತಿ ಎಂಬ ಪದ ಬಳಕೆ ಮಾಡುತ್ತಾರೆ.  ಈರೀತಿಯ ಪದ ಬಳಕೆ ಜಾತಿ ನಿಂದನೆ, ನಮ್ಮ ಜಾತಿಗೆ ಮಾಡಿದ ಅಪಮಾನ ಎಂದು ಸಮುದಾಯದ ಮುಖಂಡರು ದೂರು ದಾಖಲಿಸಿದ್ದಾರೆ.

ಕೇಂದ್ರ ಸೆನ್ಸಾರ್ ಬೋರ್ಡ್`ಗೂ ಈ ಬಗ್ಗೆ ದೂರು ದಾಖಲಿಸಿರುವ ಸಂಘಟನೆ ವಿವಾದಾತ್ಮಕ ಪದ ತೆಗೆಯುವಂತೆ ಮನವಿ ಮಾಡಿದೆ.

ನಮ್ಮ ಸಮುದಾಯ ಮೇಕೆ, ಕುರಿ ಮಾಂಸವನ್ನ ಸಮಾಜಕ್ಕೆ ಮಾರಾಟ ಮಾಡುತ್ತದೆ. ಅದು ನಮ್ಮ ವೃತ್ತಿ, ಜೀವನದ ದಾರಿ. ಸಿನಿಮಾದಲ್ಲಿ ತೋರಿಸಿರುವ ರೀತಿ ನಾವು ಅಮಾನವೀಯ ವ್ಯಕ್ತಿಗಳಲ್ಲ, ಸಮಾಜ ವಿರೋಧಿಗಳಲ್ಲ ಎಮದು ಮುಖಂಡರು ಸ್ಪಷ್ಟಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ