ಹೊಸ ಲುಕ್ ನಲ್ಲಿ ಫೋಟೊ ಪೋಸ್ಟ್ ಮಾಡಿ ಅಭಿಮಾನಿಗಳನ್ನು ಬೆರಗುಗೊಳಿಸಿದ ನಟಿ

ಗುರುವಾರ, 12 ನವೆಂಬರ್ 2020 (06:16 IST)
ಚೆನ್ನೈ : ನಟಿ ಸೋನಿಯಾ ಅಗರ್ವಾಲ್ 7ಜಿ ರೇನ್ಬೋ ಕಾಲೋನಿ ಚಿತ್ರದ ಮೂಲಕ ತಮಿಳು ಚಿತ್ರರಂಗದಲ್ಲಿ ಕಾಲಿಟ್ಟರು. ಬಳಿಕ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಚಿತ್ರರಂಗದಿಂದ ದೂರಾದ ನಟಿ ಮತ್ತೆ ಹೊಸ ರೂಪದೊಂದಿಗೆ  ಚಿತ್ರರಂಗ ಪ್ರವೇಶಿಸಿದ್ದಾರೆ.

ವಿವಾಹವಾದ ಮೇಲೆ ನಟಿ ಸೋನಿಯಾ ಅವರಿಗೆ ಹೆಚ್ಚು ಆಫರ್ ಸಿಗಲಿಲ್ಲ.  ಬಳಿಕ ಅವರು ದಾಂಪತ್ಯ ಜೀವನದ ಸಮಸ್ಯೆಯಿಂದ ಪತಿಯಿಂದ ವಿಚ್ಚೇದನ ಪಡೆದು ಮತ್ತೆ ಕೆಲವು ಚಿತ್ರಗಳಲ್ಲಿ ಮಾದಕ ಹಾಡುಗಳಲ್ಲಿ ನಟಿಸುವತ್ತ ಗಮನಹರಿಸಿದರು.

ಆದರೆ ಇದೀಗ ಅವರು ತಮ್ಮ ಮುಖ  ಮತ್ತು ದೇಹವನ್ನು ಪ್ಲಾಸ್ಟಿಕ್ ಸರ್ಜರಿಗೆ ಒಳಪಡಿಸಿ ಹೊಸ ಲುಕ್ ನೊಂದಿಗೆ ಚಿತ್ರರಂಗಕ್ಕೆ ಬಂದಿದ್ದಾರೆ, ಅವರ ಈ ರೂಪಾಂತರಗೊಂಡ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ  ಪೋಸ್ಟ್ ಮಾಡುವುದರ ಮೂಲಕ ಅಭಿಮಾನಿಗಳನ್ನು ಬೆರಗುಗೊಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ