ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಇಂದು ಕಾಂಗ್ರೆಸ್ ಗೆ ಸೇರ್ಪಡೆ

ಸೋಮವಾರ, 9 ನವೆಂಬರ್ 2020 (10:12 IST)
ಚೆನ್ನೈ : ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ.

2017ರಲ್ಲಿ ದ.ಕ ಜಿಲ್ಲಾಧಿಕಾರಿ ಸೇವೆ ಸಲ್ಲಿಸಿದ ಅವರು 2019ರಲ್ಲಿ ತಮ್ಮ ಐಎಎಸ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು.  ಇದೀಗ ಅವರು ಇಂದು ತಮಿಳುನಾಡಿನ ಚೆನ್ನೈ ನಲ್ಲಿ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ.

ಈ ಬಗ್ಗೆ ಟ್ವೀಟರ್ ನಲ್ಲಿ ಘೋಷಣೆ ಮಾಡಿದ ಅವರು, ಎಲ್ಲಿದ್ದರೂ ನನ್ನ ಜೀವನದುದ್ದಕ್ಕೂ ನಿರ್ಲಕ್ಷ್ಯ ಕ್ಕೊಳಗಾದವರಿಗೆ ಧ್ವನಿಯಾಗಲು ಪ್ರಯತ್ನಿಸುತ್ತಿರುವ ಕಾರ್ಯಕರ್ತನಾಗಿದ್ದೇನೆ. ನನ್ನ ಕೊನೆಯುಸಿರಿರುವವರೆಗೂ ಅದೇ ರೀತಿ ಮುಂದುವರಿಯುತ್ತೇನೆ ಎಂದು ತಿಳಿಸಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ