ಕೊಚ್ಚಿಯ ಕಡಲತೀರದಲ್ಲಿ ಕುಂಜಾಕೊ ಬೊಬನ್ ಜೊತೆ ಕಾಣಿಸಿಕೊಂಡ ನಯನತಾರಾ

ಬುಧವಾರ, 11 ನವೆಂಬರ್ 2020 (11:44 IST)
ಚೆನ್ನೈ : ನಟಿ ನಯನತಾರಾ ಪ್ರಸ್ತುತ ತಮಿಳು ಚಿತ್ರರಂಗದ ಪ್ರಮುಖ ನಟಿಯರಲ್ಲಿ ಒಬ್ಬರು. ಅವರ  ಅಭಿಮಾನಿಗಳು ಅವರನ್ನು ಲೇಡಿ ಸೂಪರ್ ಸ್ಟಾರ್ ಎಂದು ಕರೆಯುತ್ತಾರೆ.

ಆರ್.ಜೆ.ಬಾಲಾಜಿ ನಿರ್ದೇಶನದ ಮತ್ತು ನಯನತಾರಾ ಅಭಿನಯದ ಮೂಕ್ಕುತಿ ಅಮ್ಮನ್ ಚಿತ್ರ ನವೆಂಬರ್ 14ರಂದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಇದೀಗ ನಟಿ ನಯನತಾರಾ ಅವರು ನಟ ಕುಂಜಾಕೊ ಬೊಬನ್
ಅವರ ಜೊತೆ  ನಟಿಸುತ್ತಿದ್ದಾರೆ.

ಈ ಚಿತ್ರದ ಶೂಟಿಂಗ್ ನಲ್ಲಿರುವ ನಟಿ ನಯನತಾರಾ ನಟ ಕುಂಜಾಕೊ ಬೊಬನ್
ಜೊತೆ ಕೊಚ್ಚಿಯ ಕಡಲತೀರದಲ್ಲಿ  ಕಂಡುಬಂದಿದ್ದಾರೆ. ಇದಕ್ಕೆ ಸಂಬಂಧಪಟ್ಟ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ