ತಮ್ಮ ನೆಚ್ಚಿನ ಕಾರನ್ನು ಖರೀದಿಸಿದ ನಟ ಪ್ರಭಾಸ್

ಸೋಮವಾರ, 29 ಮಾರ್ಚ್ 2021 (11:55 IST)
ಹೈದರಾಬಾದ್ : ಬಾಹುಬಲಿ ಖ್ಯಾತಿಯ ಸ್ಟಾರ್ ನಟ ಪ್ರಭಾಸ್ ಅವರು ಇತ್ತೀಚೆಗೆ ತಮ್ಮ ನೆಚ್ಚಿನ ಕಾರಾದ ಲಂಬೋರ್ಘಿನಿ ಅವೆಂಟಡಾರ್ ರೋಡ್ಸ್ಟರ್ ಅನ್ನು ಖರೀದಿಸಿದ್ದಾರಂತೆ.

ಪ್ರಭಾಸ್ ಲಂಬೋರ್ಘಿನಿ ಅವೆಂಟಡಾರ್  ಎಸ್ ರೋಡ್ಸ್ಟರ್ ಎಲ್ಪಿ 740-4 ಜೊತೆ ಫೊಸ್ ನೀಡಿದ್ದು, ಈ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಭಾರತದಲ್ಲಿ ಈ ಕಾರಿನ ಬೆಲೆ 5.6ಕೋಟಿ ರೂ. ಆಗಿದೆ. ಇತರ ಖರ್ಚುಗಳು ಸೇರಿ ಒಟ್ಟು 6ಕೋಟಿ ರೂ.ಗಳಾಗಿದೆ. ಇದು ಕಿತ್ತಳೆ ಬಣ‍್ಣದಲ್ಲಿದ್ದು, ಸ್ಪೋರ್ಟ್ಸ್ ಕಾರಿನ ರೀತಿ ಇದೆ ಎನ್ನಲಾಗಿದೆ.

ಈ ಹಿಂದೆ ನಡೆದ ಸಂದರ್ಶನವೊಂದರಲ್ಲಿ ನಟ ಪ್ರಭಾಸ್ ಅವರು ತಾವು ಕಾರು ಪ್ರೇಮಿಯಾಗಿದ್ದು, ಲಂಬೋರ್ಘಿನಿ ಕಾರನ್ನು ಹೊಂದಲು ಬಯಸುತ್ತಿರುವುದಾಗಿ ಹೇಳಿದ್ದರು. ಅಲ್ಲದೇ ಈಗಾಗಲೇ ಇವರ ಬಳಿ ಬಿಎಂಡಬ್ಲ್ಯು , ಮರ್ಸಿಡಿಸ್ ಮತ್ತು ಆಡಿಕ್ಯೂ 5 ನ್ನು ಹೊಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ