ರೆಬಲ್ ಸ್ಟಾರ್ ಪ್ರಭಾಸ್ ಕಡೆಯಿಂದ ನಾಳೆ ಹೊಸ ಸುದ್ದಿ!

ಗುರುವಾರ, 9 ಜುಲೈ 2020 (09:05 IST)
ಹೈದರಾಬಾದ್: ಬಾಹುಬಲಿ ಬಳಿಕ ಪ್ರಭಾಸ್ ಅಭಿನಯಿಸಿದ್ದ ಸಿನಿಮಾ ಸಾಹೋ. ಇದು ಅಷ್ಟೇನೂ ಗಳಿಕೆ ಮಾಡಲಿಲ್ಲ. ಅದಾದ ಬಳಿಕ ಕೆಲವು ಸಮಯದ ಬ್ರೇಕ್ ಪಡೆದಿರುವ ಪ್ರಭಾಸ್ ಹೊಸ ಸಿನಿಮಾ ಯಾವುದೆಂದು ನಾಳೆ ಘೋಷಣೆಯಾಗಲಿದೆ.


ಪ್ರಭಾಸ್ ಗೆ ಇದು 20 ನೇ ಸಿನಿಮಾವಾಗಲಿದ್ದು, ಈ ಸಿನಿಮಾವನ್ನು ನಿರ್ದೇಶಿಸುತ್ತಿರುವುದು ರಾಧಾ ಕೃಷ್ಣ ಕುಮಾರ್.  ಪ್ರಭಾಸ್ ಗೆ ಪೂಜಾ ಹೆಗ್ಡೆ ನಾಯಕಿಯಾಗಲಿದ್ದಾರೆ.

ಆದರೆ ಈ ಸಿನಿಮಾದ ಟೈಟಲ್ ಏನು ಎಂಬುದು ನಾಳೆ ಬಹಿರಂಗವಾಗಲಿದೆ. ನಾಳೆ 10 ಗಂಟೆಗೆ ಸಿನಿಮಾದ ಟೈಟಲ್ ಜತೆಗೆ ಫಸ್ಟ್ ಲುಕ್ ಬಿಡುಗಡೆಯಾಗಲಿದೆ. ಮೂಲಗಳ ಪ್ರಕಾರ ಇದೂ ಕೂಡಾ ತೆಲುಗು ಮಾತ್ರವಲ್ಲದೆ, ಹಿಂದಿ, ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ