ಅನುಷ್ಕಾ ಶೆಟ್ಟಿ ಜತೆಗೆ ತನ್ನ ರಿಲೇಷನ್ ಶಿಪ್ ಬಗ್ಗೆ ಕೊನೆಗೂ ಬಾಯ್ಬಿಟ್ಟ ಪ್ರಭಾಸ್

ಸೋಮವಾರ, 19 ಆಗಸ್ಟ್ 2019 (08:57 IST)
ಹೈದರಾಬಾದ್: ಬಾಹುಬಲಿ ಖ್ಯಾತಿ ಪ್ರಭಾಸ್ ಮದುವೆ, ಲವ್ ಲೈಫ್ ಬಗ್ಗೆ ಆಗಾಗ ರೂಮರ್ ಗಳು ಕೇಳಿಬರುತ್ತಲೇ ಇರುತ್ತವೆ. ಪ್ರಭಾಸ್ ಅನುಷ್ಕಾ ಶೆಟ್ಟಿಯನ್ನು ಲವ್ ಮಾಡುತ್ತಿದ್ದಾರೆ, ಇಬ್ಬರೂ ಮದುವೆಯಾಗುತ್ತಾರೆ ಎಂದೆಲ್ಲಾ ರೂಮರ್ ಗಳು ಕೇಳಿಬರುತ್ತಲೇ ಇರುತ್ತವೆ.


ಈಗ ಪ್ರಭಾಸ್ ಸಾಹೋ ಸಿನಿಮಾ ಬಿಡುಗಡೆಯಲ್ಲಿ ಬ್ಯುಸಿಯಾಗಿದ್ದು, ಇದು ಮುಗಿದ ಬಳಿಕ ಅವರು ಮದುವೆಯಾಗುತ್ತಾರೆ ಎಂದು ಸುದ್ದಿಯಾಗಿತ್ತು. ಇದೀಗ ಅನುಷ್ಕಾ ಶರ್ಮಾ ಜತೆಗಿನ ತಮ್ಮ ರಿಲೇಷನ್ ಶಿಪ್ ಬಗ್ಗೆ ಕೊನೆಗೂ ಅನುಷ್ಕಾ ಬಾಯ್ಬಿಟ್ಟಿದ್ದಾರೆ.

ಅನುಷ್ಕಾ ಜತೆಗೆ ತಾವು ಲವ್ ರಿಲೇಷನ್ ಶಿಪ್ ನಲ್ಲಿ ಇಲ್ಲ. ಒಂದು ವೇಳೆ ಹಾಗೇನಾದರೂ ಇದ್ದರೂ ಅದು ಎಲ್ಲರಿಗೂ ಗೊತ್ತಾಗುತ್ತದೆ ಎಂದು ಪ್ರಭಾಸ್ ಹೇಳಿಕೊಂಡಿದ್ದಾರೆ. ಬಾಹುಬಲಿ ಶೂಟಿಂಗ್ ಮುಗಿದ ಬಳಿಕ ನಾವು ಒಟ್ಟಿಗೆ ಕಾಲ ಕಳೆದಿಲ್ಲ. ಇದೆಲ್ಲಾ ರೂಮರ್ ಅಷ್ಟೇ ಎಂದು ಪ್ರಭಾಸ್ ಸ್ಪಷ್ಟಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ