ಗೆಳತಿ ಅನುಷ್ಕಾಗಾಗಿ ಸಾಹೋ ಸ್ಪೆಷಲ್ ಸ್ಕ್ರೀನಿಂಗ್ ಮಾಡಲಿದ್ದಾರಾ ಪ್ರಭಾಸ್?!

ಶನಿವಾರ, 10 ಆಗಸ್ಟ್ 2019 (09:04 IST)
ಹೈದರಾಬಾದ್: ನಮ್ಮ ನಡುವೆ ಏನೂ ಇಲ್ಲ ಎಂದು ಇಬ್ಬರೂ ಅಲ್ಲಗಳೆಯುತ್ತಿದ್ದರೂ ಪ್ರಭಾಸ್ ಮತ್ತು ಅನುಷ್ಕಾ ನಡುವೆ ರೂಮರ್ ಗಳು ಆಗಾಗ ಸುಳಿದಾಡುತ್ತಲೇ ಇರುತ್ತವೆ. ಅದಕ್ಕೆ ಪುಷ್ಠಿ ನೀಡುವಂತೆ ಈಗ ಮತ್ತೊಂದು ಸುದ್ದಿ ಹಬ್ಬಿದೆ.


ಆಗಸ್ಟ್ 30 ರಂದು ಬಾಹುಬಲಿ ಬಳಿಕ ಪ್ರಭಾಸ್ ನಟಿಸಿರುವ ಸಾಹೋ ಸಿನಿಮಾ ಬಿಡುಗಡೆಯಾಗಲಿದೆ. ಈ ಸಿನಿಮಾ ಬಗ್ಗೆ ಪ್ರಭಾಸ್ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಯಿದೆ.

ಕೆಲವು ಮೂಲಗಳ ಪ್ರಕಾರ ಪ್ರಭಾಸ್ ಗೆಳತಿ ಅನುಷ್ಕಾ ಶೆಟ್ಟಿಗಾಗಿ ಸಾಹೋ ಸಿನಿಮಾದ ವಿಶೇಷ ಪ್ರದರ್ಶನ ತೋರಿಸಲಿದ್ದಾರೆ ಎನ್ನಲಾಗಿದೆ. ಇದು ಮತ್ತೆ ಇವರಿಬ್ಬರ ನಡುವೆ ಸ್ನೇಹಕ್ಕೂ ಮೀರಿದ ಸಂಬಂಧವಿದೆ ಎಂಬ ಗಾಸಿಪ್ ಗೆ ನೀರೆರೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ