ಸೈಮಾ ಪ್ರಶಸ್ತಿ ಪಡೆದ ಸ್ಯಾಂಡಲ್ ವುಡ್ ತಾರೆಯರು ಯಾರೆಲ್ಲಾ?

ಶನಿವಾರ, 17 ಆಗಸ್ಟ್ 2019 (10:20 IST)
ಬೆಂಗಳೂರು: ದಕ್ಷಿಣ ಭಾರತ ಸಿನಿಮಾದ ಖ್ಯಾತ ಪ್ರಶಸ್ತಿ ಸಮಾರಂಭ ಸೈಮಾ ಅವಾರ್ಡ್ಸ್ ನಲ್ಲಿ ಕನ್ನಡ ಚಿತ್ರರಂಗದ ಅನೇಕ ಸಾಧಕರು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದಿದ್ದಾರೆ.


ಕೆಜಿಎಫ್ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದರೆ ಅದೇ ಚಿತ್ರಕ್ಕೆ ರಾಕಿಂಗ್ ಸ್ಟಾರ್ ಯಶ್ ಅತ್ಯುತ್ತಮ ನಾಯಕ ನಟ, ಪ್ರಶಾಂತ್ ನೀಲ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ. ಅಷ್ಟೇ ಅಲ್ಲ, ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಯೂ ಕೆಜಿಎಫ್ ಸಂಗೀತ ನಿರ್ದೇಶಕ ರವಿ ಬಸ್ರೂರುಗೆ ಸಿಕ್ಕಿದೆ.

ಇನ್ನು ಕಿರುತೆರೆಯಿಂದ ಹಿರಿತೆರೆಗೆ ಕಾಲಿಟ್ಟ ಅನುಪಮಾ ಗೌಡ ಆ ಕರಾಳ ರಾತ್ರಿ ಸಿನಿಮಾದಲ್ಲಿ ಅಭಿನಯಕ್ಕಾಗಿ ಅತ್ಯುತ್ತಮ ನಾಯಕಿ ನಟಿ ಪ್ರಶಸ್ತಿ ಪಡೆದಿದ್ದಾರೆ.ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾದಲ್ಲಿ ಅಭಿನಯಿಸಿದ್ದ ಪ್ರಕಾಶ್ ಕೆ ತುಮಿನಾಡು ಅವರಿಗೆ ಹಾಗೂ ಪೋಷಕ ನಟಿ ಪ್ರಶಸ್ತಿ ಕೆಜಿಎಫ್ ಚಿತ್ರದಲ್ಲಿ ಅಭಿನಯಿಸಿದ್ದ ಅರ್ಚನಾಗೆ ಲಭಿಸಿದೆ. ಅಯೋಗ್ಯ ಸಿನಿಮಾ ನಿರ್ದೇಶಕ ಮಹೇಶ್ ಕುಮಾರ್ ಉದನಯೋನ್ಮುಖ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ. ಇದೇ ಚಿತ್ರ ಏನಮ್ಮಿ ಏನಮ್ಮಿ ಹಾಡು ಬರೆದ ಚೇತನ್ ಕುಮಾರ್ ಅತ್ಯುತ್ತಮ ಗೀತರಚನೆಕಾರರಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ