‘ಸಲಾರ್’ ಗೆ ಅದ್ಧೂರಿ ಚಾಲನೆ: ರಾಕಿ ಭಾಯ್ ಯಶ್-ರೆಬಲ್ ಸ್ಟಾರ್ ಪ್ರಭಾಸ್ ಗೆ ಜೈ ಎಂದ ಫ್ಯಾನ್ಸ್

ಶುಕ್ರವಾರ, 15 ಜನವರಿ 2021 (17:41 IST)
ಹೈದರಾಬಾದ್: ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಮೂಡಿಬರಲಿರುವ ಸಲಾರ್ ಸಿನಿಮಾಗೆ ಇಂದು ಅದ್ಧೂರಿ ಚಾಲನೆ ಸಿಕ್ಕಿದೆ.


ಈ ಸಿನಿಮಾ ಮುಹೂರ್ತ ಪೂಜೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ಕೂಡಾ ಪಾಲ್ಗೊಂಡಿದ್ದಾರೆ. ಯಶ್ ಮತ್ತು ಪ್ರಭಾಸ್ ಜೊತೆಯಾಗಿ ಫೋಟೋಗೆ ಪೋಸ್ ನೀಡಿರುವುದು ಅಭಿಮಾನಿಗಳಿಗೆ ಖುಷಿ ಹೆಚ್ಚಿಸಿದೆ. ಈ ಮೊದಲು ಕೆಜಿಎಫ್ 1 ಸಿನಿಮಾ ಪ್ರಚಾರಕ್ಕೆ ಪ್ರಭಾಸ್ ಸಾಥ್ ಕೊಟ್ಟಿದ್ದರು. ಇದೀಗ ಯಶ್ ಸಲಾರ್ ಸಿನಿಮಾಗೆ ಸಾಥ್ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ