ಪುನೀತ್ ಗಾಗಿ ಲೈವ್ ಡ್ಯಾನ್ಸ್ ಕಾರ್ಯಕ್ರಮ ಕೊಡಲಿದ್ದಾರೆ ಪ್ರಭುದೇವ

ಗುರುವಾರ, 20 ಅಕ್ಟೋಬರ್ 2022 (10:12 IST)
ಬೆಂಗಳೂರು: ಡ್ಯಾನ್ಸ್ ಎಂದರೆ ಪುನೀತ್ ರಾಜ್ ಕುಮಾರ್ ಗೆ ಅಚ್ಚುಮೆಚ್ಚು. ಗಂಧದ ಗುಡಿ ಪ್ರಿ ರಿಲೀಸ್ ಈವೆಂಟ್ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಮೈಕಲ್ ಜ್ಯಾಕ್ಸನ್ ಖ್ಯಾತಿಯ ಖ್ಯಾತ ನಟ, ನಿರ್ದೇಶಕ ಪ್ರಭುದೇವ ನೃತ್ಯದ ಅರ್ಪಣೆ ನೀಡಲಿದ್ದಾರೆ.

ನಾಳೆ ನಡೆಯಲಿರುವ ಗಂಧದ ಗುಡಿ ಪ್ರಿ ರಿಲೀಸ್ ಈವೆಂಟ್ ಕಾರ್ಯಕ್ರಮದಲ್ಲಿ ಪ್ರಭುದೇವ ಲೈವ್ ಡ್ಯಾನ್ಸ್ ಕಾರ್ಯಕ್ರಮ ನೀಡಲಿದ್ದಾರೆ.

ಪ್ರಭುದೇವ ಹೆಜ್ಜೆ ಹಾಕುತ್ತಾರೆಂದರೆ ಸಾಕಷ್ಟು ಮಂದಿ ಕಾತುರದಿಂದ ಕಾಯುತ್ತಿರುತ್ತಾರೆ. ಸ್ವತಃ ಪುನೀತ್ ಪ್ರಭುದೇವ ಅವರ ಅಭಿಮಾನಿಯಾಗಿದ್ದರು. ಅವರ ಕೊನೆಯ ಸಿನಿಮಾ ಲಕ್ಕಿ ಮ್ಯಾನ್ ನಲ್ಲಿ ಪ್ರಭುದೇವ ಜೊತೆಗೆ ಪುನೀತ್ ಹಾಡೊಂದರಲ್ಲಿ ಹೆಜ್ಜೆ ಹಾಕಿದ್ದರು. ಇದೀಗ ತಮ್ಮ ಸ್ನೇಹಿತ ಪುನೀತ್ ಗೆ ಪ್ರಭುದೇವ ನೃತ್ಯದ ಮೂಲಕವೇ ಗೌರವ ನೀಡಲಿದ್ದಾರೆ.

-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ