ಗಂಧದ ಗುಡಿ ಪ್ರಿ ರಿಲೀಸ್ ಈವೆಂಟ್ ಗೆ ಬರಲು ಪಾಸ್ ಬೇಕಾಗಿಲ್ಲ

ಗುರುವಾರ, 20 ಅಕ್ಟೋಬರ್ 2022 (10:00 IST)
WD
ಬೆಂಗಳೂರು: ನಾಳೆ ಅರಮನೆ ಮೈದಾನದಲ್ಲಿ ನಡೆಯಲಿರುವ ಪುನೀತ್ ಪರ್ವ ಕಾರ್ಯಕ್ರಮಕ್ಕೆ ಅಭಿಮಾನಿಗಳೂ ಬರಬಹುದು. ಇದಕ್ಕೆ ಯಾವುದೇ ಪಾಸ್ ಅವಶ್ಯಕತೆಯಿಲ್ಲ.

ಗಂಧದ ಗುಡಿ ಪ್ರಿ ರಿಲೀಸ್ ಈವೆಂಟ್ ನಾಳೆ ಸಂಜೆ 6 ಗಂಟೆಗೆ ಅರಮನೆ ಮೈದಾನದಲ್ಲಿ ನಡೆಯಲಿದ್ದು, ಗಣ್ಯಾತಿ ಗಣ್ಯರು ಆಗಮಿಸಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಗಣ್ಯರಿಗೆ ಮಾತ್ರ ಪಾಸ್ ನೀಡಲಾಗುತ್ತಿದೆ. ಉಳಿದಂತೆ ಸಾಮಾನ್ಯ ಜನರೂ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದಾಗಿದ್ದು ಯಾವುದೇ ಪಾಸ್ ಅವಶ್ಯಕತೆಯಿಲ್ಲ. ಬದಲಾಗಿ ಬಿಳಿ ಬಟ್ಟೆ ಧರಿಸಿ ಬಂದರೆ ಸಾಕು ಎಂದು ಪ್ರಕಟಣೆ ನೀಡಲಾಗಿದೆ.

-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ