ಹೇಡಿಗಳಿರಾ…! ಕೋಮುವಾದಿಗಳ ವಿರುದ್ಧ ಮತ್ತೆ ಗುಡುಗಿದ ಪ್ರಕಾಶ್ ರೈ
ಬುಧವಾರ, 3 ಜನವರಿ 2018 (08:30 IST)
ಚೆನ್ನೈ: ನಟ ಪ್ರಕಾಶ್ ರೈ ಮತ್ತೊಮ್ಮೆ ಕೋಮುವಾದಿ ಶಕ್ತಿಗಳ ವಿರುದ್ಧ ಟ್ವಿಟರ್ ವಾರ್ ನಡೆಸಿದ್ದಾರೆ. ಕೋಮುವಾದಿಗಳು ಹೇಡಿಗಳು ಎಂದು ಅವರು ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನಟ ಪ್ರಕಾಶ್ ರೈ ಮಾತನಾಡುವಾಗ ರಾಜಕೀಯ ನಾಯಕರಾಗುವ ಬಗ್ಗೆ ಮಾತನಾಡಿದ್ದರು. ನಮ್ಮ ದೇಶದಲ್ಲಿ ಸಾಮರ್ಥ್ಯವುಳ್ಳ ಯಾರೇ ಆದರೂ ದೇಶದ ಯಾವುದೇ ಭಾಗದಿಂದ ನಾಯಕರಾಗಬಹುದು ಎಂದಿರುವುದನ್ನು ಸಮರ್ಥಿಸಿಕೊಂಡಿರುವ ಪ್ರಕಾಶ್ ರೈ ಕೋಮುವಾದಿಗಳು ಇದೇ ಹೇಳಿಕೆಯನ್ನು ತಪ್ಪಾಗಿ ಪ್ರಚಾರ ಮಾಡುತ್ತಿರುವುದು ನೋಡಿದರೆ ಅವರೊಳಗೇ ಭಯ ಹುಟ್ಟಿಕೊಂಡಿರುವುದು ಸ್ಪಷ್ಟವಾಗುತ್ತದೆ ಎಂದು ಟೀಕಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ