ಸಲಾರ್ ಗಾಗಿ ಪ್ರಭಾಸ್, ಪ್ರಶಾಂತ್ ನೀಲ್ ಪಡೆದ ಸಂಭಾವನೆ ವಿವರ
ಗುರುವಾರ, 21 ಡಿಸೆಂಬರ್ 2023 (11:11 IST)
ಹೈದರಾಬಾದ್: ಹೊಂಬಾಳೆ ಫಿಲಂಸ್ ನಿರ್ಮಾಣದ ಪ್ರಶಾಂತ್ ನೀಲ್ ನಿರ್ದೇಶನದ ಪ್ರಭಾಸ್ ನಾಯಕರಾಗಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಸಲಾರ್ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ.
ನಾಳೆ ವಿಶ್ವದಾದ್ಯಂತ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಲಿರುವ ಸಿನಿಮಾ ಮೊದಲ ದಿನವೇ ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಬಾಚುವ ವಿಶ್ವಾಸವಿದೆ. ಈ ಸಿನಿಮಾದ ಬಜೆಟ್ ಸುಮಾರು 400 ಕೋಟಿ ರೂ. ಬಹುಕೋಟಿ ವೆಚ್ಚದ ಸಿನಿಮಾದಲ್ಲಿ ಅಭಿನಯಿಸಲು ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್, ನಿರ್ದೇಶಕ ಪ್ರಶಾಂತ್ ನೀಲ್ ಪಡೆದ ಸಂಭಾವನೆ ವಿವರ ಇಲ್ಲಿದೆ.
ಸಲಾರ್ ಸಿನಿಮಾದಲ್ಲಿ ಅಭಿನಯಿಸಲು ಪ್ರಭಾಸ್ 100 ಕೋಟಿ ಸಂಭಾವನೆ ಮತ್ತು ಚಿತ್ರದ ಆದಾಯದಲ್ಲಿ ಶೇ.10 ರಷ್ಟು ಪಾಲು ಪಡೆಯಲಿದ್ದಾರೆ ಎನ್ನಲಾಗಿದೆ. ಕೆಜಿಎಫ್ ಬಳಿಕ ಬೇಡಿಕೆ ಹೆಚ್ಚಿಸಿಕೊಂಡ ನಿರ್ದೇಶಕ ಪ್ರಶಾಂತ್ ನೀಲ್ ಈ ಸಿನಿಮಾಗೆ ಪಡೆದಿರುವುದು ಬರೋಬ್ಬರಿ 50 ಕೋಟಿ ರೂ. ಸಂಭಾವನೆ.
ಇನ್ನು ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸಿರುವ ಪೃಥ್ವಿರಾಜ್ ಸುಕುಮಾರನ್ ಮತ್ತು ನಾಯಕಿ ಪಾತ್ರ ಮಾಡಿರುವ ಶ್ರುತಿ ಹಾಸನ್ ತಲಾ 4 ಕೋಟಿ ರೂ. ಸಂಭಾವನೆ ಜೇಬಿಗಿಳಿಸಿದ್ದಾರೆ.