ಸ್ಯಾಂಡಲ್ ವುಡ್ ಡ್ರಗ್ ಮಾಫಿಯಾ ಬಗ್ಗೆ ಇಂದು ಪ್ರಶಾಂತ್ ಸಂಬರಗಿಯಿಂದ ಸ್ಪೋಟಕ ಸುದ್ದಿ

ಗುರುವಾರ, 3 ಸೆಪ್ಟಂಬರ್ 2020 (10:07 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಮಾಫಿಯಾ ಬಗ್ಗೆ ಇಂದು ಪ್ರಶಾಂತ್ ಸಂಬರಗಿ ಮಹತ್ವದ ವಿಚಾರಗಳನ್ನು ಬಹಿರಂಗಪಡಿಸುವುದಾಗಿ ಹೇಳಿಕೊಂಡಿದ್ದಾರೆ.

 

ನಿನ್ನೆ ಫಿಲಂ ಚೇಂಬರ್ ಸಭೆ ಬಳಿಕ ಈ ವಿಚಾರದಲ್ಲಿ ಪ್ರಶಾಂತ್ ಸಂಬರಗಿ ಹೇಳಿಕೆ ನೀಡಿದ್ದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಇದು ಅವರನ್ನು ಕೆರಳಿಸಿದೆ. ಹೀಗಾಗಿ ಇಂದು ಫಿಲಂ ಚೇಂಬರ್ ನ ಅಕ್ರಮಗಳು, ಸ್ಯಾಂಡಲ್ ವುಡ್ ನಲ್ಲಿ ನಡೆಯುತ್ತಿರುವ ಅಕ್ರಮಗಳ ವಿಚಾರಗಳನ್ನು ಪತ್ರಿಕಾಗೋಷ್ಟಿ ಕರೆದು ಬಯಲು ಮಾಡುವುದಾಗಿ ಖಾಸಗಿ ಮಾಧ‍್ಯಮದಲ್ಲಿ ಹೇಳಿಕೊಂಡಿದ್ದರು. ಹೀಗಾಗಿ ಅವರು ಇಂದು ಯಾವ ವಿಚಾರದ ಬಗ್ಗೆ ಸ್ಪೋಟಕ ಸತ್ಯ ಬಯಲು ಮಾಡಬಹುದು ಎಂಬ ಕುತೂಹಲ ಎಲ್ಲರಲ್ಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ