ದೀಪಕ್ ರಾವ್ ಅವರ ಮನೆಗೆ ಭೇಟಿ ನೀಡಿದ ಒಳ್ಳೆ ಹುಡುಗ ಪ್ರಥಮ್ ಕಿಡಿಕಾರಿದ್ದು ಯಾರ ವಿರುದ್ಧ...?
ಸೋಮವಾರ, 8 ಜನವರಿ 2018 (07:59 IST)
ಮಂಗಳೂರು : ದುಷ್ಕರ್ಮಿಗಳಿಂದ ಹತ್ಯೆಯಾದ ಮಂಗಳೂರಿನ ಹಿಂದೂಪರ ಸಂಘಟನೆಯ ಕಾರ್ಯಕರ್ತ ದೀಪಕ್ ರಾವ್ ಅವರ ಮನೆಗೆ ಭಾನುವಾರ ಬಿಗ್ ಬಾಸ್ ಸೀಸನ್ 4 ನ ವಿನ್ನರ್ ಪ್ರಥಮ್ ಅವರು ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು. ಹಾಗೆ ದೀಪಕ್ ಮನೆಯವರಿಗೆ ಪ್ರಥಮ್ ಅವರು ವೈಯಕ್ತಿಕವಾಗಿ 25 ಸಾವಿರ ರೂ. ಸಹಾಯಧನ ನೀಡಿದರು.
ನಂತರ ಮನೆಯಿಂದ ಹೊರಬಂದ ಪ್ರಥಮ್ ಅವರು’ ಮಂಗಳೂರನ್ನು ಯಾಕೆ ಕ್ಲೀನ್ ಸಿಟಿ ಎನ್ನುತ್ತಿರಿ. ಇಲ್ಲಿ ನೆತ್ತರು ಹರಿದು ಕೆಂಪಾಗಿದೆ. ಇದು ಕ್ಲೀನ್ ಸಿಟಿಯೇ’ ಎಂದು ಪ್ರಶ್ನಿಸಿ ಕಿಡಿಕಾರಿದರು. ಹಾಗೆ ಸಚಿವ ಖಾದರ್ ವಿರುದ್ಧ ಕೋಪಗೊಂಡು ‘ಅವರು ಕೆಲ ಆರೋಪಿಗಳ ಜೊತೆ ಇರುವ ಫೋಟೋಗಳು ಹರಿದಾಡುತ್ತಿವೆ. ಎಲ್ಲರೂ ಕೇಳಿದಂತೆ ನಾನು ಅವರ ರಾಜೀನಾಮೆ ಕೇಳುವುದಿಲ್ಲ. ಅವರು ರಾಜಕೀಯ ಸನ್ಯಾಸ ಸ್ವೀಕರಿಸಬೇಕು ಎಂದು ಒತ್ತಾಯಿಸುತ್ತೇನೆ ‘ ಎಂದು ಹೇಳಿದರು. ಹಾಗೆ ರಮಾನಾಥ ರೈ ವಿರುದ್ದ ಕೂಡ ಕಿಡಿಕಾರಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ