BBK12: ಕಳಪೆ ಕೊಟ್ಟಿದ್ದಕ್ಕೆ ದುರಹಂಕಾರ ತೋರಿಸ್ತಿದ್ದಾರಾ ಅಶ್ವಿನಿ ಗೌಡ

Krishnaveni K

ಶನಿವಾರ, 25 ಅಕ್ಟೋಬರ್ 2025 (11:53 IST)
Photo Credit: X
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ಈ ವಾರ ತಮಗೆ ಕಳಪೆ ಕೊಟ್ಟ ಏಕೈಕ ಕಾರಣಕ್ಕೆ ಅಶ್ವಿನಿ ಗೌಡ ಮನೆಯವರನ್ನೆಲ್ಲಾ ಆಟ ಅಡಿಸ್ತಿದ್ದಾರೆ. ಇದಕ್ಕೆ ವೀಕ್ಷಕರು ದುರಹಂಕಾರ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಸದಾ ಒಂದಿಲ್ಲೊಂದು ಕಾರಣಗಳಿಗೆ ಅಶ್ವಿನಿ ಗೌಡ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗುತ್ತಲೇ ಇದ್ದಾರೆ. ಅದರಲ್ಲೂ ರಕ್ಷಿತಾ ಶೆಟ್ಟಿ ಜೊತೆ ಕಿತ್ತಾಟವಾದ ಮೇಲಂತೂ ಅವರನ್ನು ವಿರೋಧಿಸುವ ಗುಂಪೇ ಹುಟ್ಟಿಕೊಂಡಿದೆ ಎನ್ನಬಹುದು.

 ಈ ವಾರ ಮನೆಯವರೆಲ್ಲರೂ ಸೇರಿ ಅಶ್ವಿನಿ ಗೌಡಗೆ ಕಳಪೆ ಪಟ್ಟಿ ಕೊಟ್ಟಿದ್ದಾರೆ. ಹೀಗಾಗಿ ಅವರು ಜೈಲು ಸೇರಿದ್ದಾರೆ. ಆದರೆ ಅಲ್ಲಿ ಹೋದರೂ ನಾನು ಹುಲಿನೇ ಎಂದು ಕಾಲಿಟ್ಟಿದ್ದ ಅಶ್ವಿನಿ ಗೌಡ, ಮನೆಯವರು ಹೇಳುವ ಕೆಲಸವನ್ನು ಬೇಕೆಂದೇ ಲೇಟ್ ಮಾಡಿ ಆಟ ಆಡಿಸ್ತಾ ಇದ್ದಾರೆ.

ಅದರಲ್ಲೂ ಬಾತ್ ರೂಂ ಒಳಗೆ ಮನೆಯ ಎಲ್ಲಾ ಸದಸ್ಯರ ಬ್ರಷ್ ತೆಗೆದುಕೊಂಡು ಒಳ ಹೋದ ವಿಡಿಯೋ ನೋಡಿದ ಮೇಲೆ ವೀಕ್ಷಕರು ಸಿಕ್ಕಾಪಟ್ಟೆ ಸಿಟ್ಟು ಹೊರಹಾಕಿದ್ದಾರೆ. ಆಕೆ ನಿಜವಾಗಿಯೂ ಬ್ರಷ್ ನಲ್ಲಿ ಬಾತ್ ರೂಂ ತೊಳೆದಿದ್ದರೆ ಇದನ್ನು ಸುಮ್ಮನೇ ಬಿಡಬಾರದು. ಕಿಚ್ಚ ಸುದೀಪ್ ಈ ವಾರವೂ ಆಕೆಗೆ ಬೆಂಡೆತ್ತಬೇಕು. ಇದು ದುರಹಂಕಾರದ ಪರಮಾವಧಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ