ಏಕ್ ಲವ್ ಯಾ ಸಿನಿಮಾ ವೀಕ್ಷಿಲು ಸಿಎಂಗೆ ಆಹ್ವಾನವಿತ್ತ ಪ್ರೇಮ್

ಭಾನುವಾರ, 20 ಫೆಬ್ರವರಿ 2022 (09:20 IST)
ಬೆಂಗಳೂರು: ಇದೇ ಫೆಬ್ರವರಿ 24 ರಂದು ಬಿಡುಗಡೆಯಾಗಲಿರುವ ಏಕ್ ಲವ್ ಯಾ ಸಿನಿಮಾ ವೀಕ್ಷಿಸಲು ನಿರ್ದೇಶಕ ಪ್ರೇಮ್ ಸಿಎಂ ಬಸವರಾಜ ಬೊಮ್ಮಾಯಿಗೆ ಆಹ್ವಾನವಿತ್ತಿದ್ದಾರೆ.

ಪ್ರೇಮ್ ನಿರ್ದೇಶನದ, ರಕ್ಷಿತ್ ಪ್ರೇಮ್ ನಿರ್ಮಾಣದ ರಾಣಾ ನಾಯಕರಾಗಿರುವ ಏಕ್ ಲವ್ ಯಾ ಸಿನಿಮಾದಲ್ಲಿ ರಚಿತಾ ರಾಂ ಕೂಡಾ ವಿಶೇಷ ಪಾತ್ರ ಮಾಡಿದ್ದಾರೆ. ಅರ್ಜುನ್ ಜನ್ಯಾ ಸಂಗೀತ ಸಂಯೋಜನೆಯ ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿವೆ.

ಈ ಸಿನಿಮಾದ ಪ್ರೀಮಿಯರ್ ಶೋಗೆ ಆಗಮಿಸುವಂತೆ ಖುದ್ದಾಗಿ ಪ್ರೇಮ್ ಸಿಎಂ ಬಸವರಾಜ ಬೊಮ್ಮಾಯಿಗೆ ಆಹ್ವಾನವಿತ್ತಿದ್ದಾರೆ. ಹೀಗಾಗಿ ಪ್ರೀಮಿಯರ್ ಶೋಗೆ ಸಿಎಂ ಅತಿಥಿಯಾಗಿ ಬರುವ ಸಾಧ‍್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ