ಕೆ.ಮಂಜು ಪುತ್ರನಿಗೆ ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ಜೋಡಿ

ಗುರುವಾರ, 29 ಆಗಸ್ಟ್ 2019 (09:23 IST)
ಬೆಂಗಳೂರು: ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ಮಂಜು ನಾಯಕಾರಿ ಅಭಿನಯಿಸಿರುವ ವಿಷ್ಣುಪ್ರಿಯ ಸಿನಿಮಾಗೆ ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ನಾಯಕಿಯಾಗುತ್ತಿದ್ದಾರೆ.


ಈ ಹಿಂದೆ ಕನ್ನಡದಲ್ಲಿ ಡಬ್ ಸಿನಿಮಾವೊಂದರಲ್ಲಿ ಪ್ರಿಯಾ ಕಾಣಿಸಿಕೊಂಡಿದ್ದರು. ಆಗ ಮುಂದೊಂದು ದಿನ ಒಳ್ಳೆಯ ಸ್ಕ್ರಿಪ್ಟ್ ಸಿಕ್ಕರೆ ಕನ್ನಡದಲ್ಲಿ ಅಭಿನಯಿಸುವುದಾಗಿ ಹೇಳಿಕೊಂಡಿದ್ದರು.

ಈಗ ವಿಷ್ಣು ಪ್ರಿಯ ಸಿನಿಮಾ ಮೂಲಕ ಮೊದಲ ಬಾರಿಗೆ ಕನ್ನಡದಲ್ಲಿ ಪೂರ್ಣಪ್ರಮಾಣದಲ್ಲಿ ನಾಯಕರಾಗುತ್ತಿದ್ದಾರೆ ಪ್ರಿಯಾ. ಈ ಮೂಲಕ ಮತ್ತೊಬ್ಬ ಮಲಯಾಳಿ ನಟಿ ಕನ್ನಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ