ಮಗಳ ಜತೆ 'ಬಾಲರಾಮನ' ದರ್ಶನ ಪಡೆದ ಪ್ರಿಯಾಂಕ, ನಿಕ್ ಜೋನಾಸ್‌

Sampriya

ಬುಧವಾರ, 20 ಮಾರ್ಚ್ 2024 (16:34 IST)
Photo Courtesy Facebook
ಅಯೋಧ್ಯೆ: ಖ್ಯಾತ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಅವರ ಪತಿ ಗಾಯಕ ನಿಕ್ ಜೋನಾಸ್‌ ದಂಪತಿ ತಮ್ಮ ಮಗಳ ಜತೆ ಇಂದು ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಿದ್ದಾರೆ.

ಮಗುವಿನ ಆಗಮನದ ನಂತರ ಅಮೆರಿಕದಲ್ಲಿ ನೆಲೆಸಿರುವ ಈ ಜೋಡಿ ಈಚೆಗೆ ಮುಂಬೈ ಆಗಮಿಸಿದ್ದರು. ಮಗಳ ಜತೆ ಪ್ರಿಯಾಂಕ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ದಿನಗಳ ಹಿಂದೆಯಷ್ಟೇ ನಿಕ್ ಜೋನಾಸ್‌ ಕೂಡಾ ಮುಂಬೈಗೆ ಆಗಮಿಸಿದ್ದರು.

ಇದೀಗ ಈ ಸ್ಟಾರ್ ಜೋಡಿ ಬಾಲರಾಮನ ದರ್ಶನವನ್ನು ಪಡೆದುಕೊಂಡಿದ್ದಾರೆ.  ಪ್ರಿಯಾಂಕಾ ಹಾಗೂ ನಿಕ್ 2018ರ ಡಿಸೆಂಬರ್‌ನಲ್ಲಿ ಜೈಪುರದಲ್ಲಿ ಮದುವೆಯಾಗಿದ್ದರು. ಬಳಿಕ 2022ರ ಜನವರಿ 22ರಂದು ಪ್ರಿಯಾಂಕಾ-ನಿಕ್ ದಂಪತಿ ಬಾಡಿಗೆ ತಾಯಿಯ ಮೂಲಕ ಮಗು ಪಡೆದಿದ್ದರು.

 ಹಾಲಿವುಡ್‌ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಪ್ರಿಯಾಂಕ, 'ಬೇವಾಚ್', 'ಎ ಕಿಡ್ ಲೈಕ್ ಜ್ಯಾಕ್', 'ಇಸಂಟ್‌ ಇಟ್ ರೊಮ್ಯಾಂಟಿಕ್' ಮತ್ತು 'ವಿ ಕ್ಯಾನ್ ಬಿ ಹೀರೋಸ್' ಚಿತ್ರಗಳಲ್ಲಿ ಅಭಿನಯಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ