ಸೆಟ್ಟೇರಿತು 'ಇಳಯರಾಜ' ಜೀವನಚರಿತ್ರೆ ಸಿನಿಮಾ: ಸಂಗೀತಾ ಮಾಂತ್ರಿಕನಾಗಿ ನಟ ಧನುಷ್

Sampriya

ಬುಧವಾರ, 20 ಮಾರ್ಚ್ 2024 (15:25 IST)
Photo Courtesy X
ತಮಿಳುನಾಡು: ಪ್ರಸಿದ್ಧ ಸಂಗೀತಗಾರ ಇಳಯರಾಜ ಜೀವನಚರಿತ್ರೆ ಆಧಾರಿತ ಸಿನಿಮಾದಲ್ಲಿ ಸ್ಟಾರ್ ನಟ ಧನುಷ್ ಅವರು ಅಭಿನಯಿಸುತ್ತಿದ್ದಾರೆ. 
 
ಟೈಟಲ್ ಲಾಂಚ್ ಸಮಾರಂಭದಲ್ಲಿ ಇಳಯರಾಜ, ನಟ ಕಮಲ್ ಹಾಸನ್ ಮತ್ತು ಇತರರು ಭಾಗವಹಿಸಿದ್ದರು. ಈ ವೇಳೆ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಅನಾವರಣಗೊಳಿಸಿದರು.
 
ಧನುಷ್ ಜೊತೆ ಕ್ಯಾಪ್ಟನ್ ಮಿಲ್ಲರ್ ಚಿತ್ರವನ್ನು ನಿರ್ದೇಶಿಸಿದ್ದ ಅರುಣ್ ಮಾಥೇಶ್ವರನ್ ಅವರೇ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸದ್ಯದಲ್ಲೇ ಸಿನಿಮಾ ಶೂಟಿಂಗ್ ಆರಂಭಗೊಳ್ಳಲಿದ್ದು, ನೀರವ್ ಶಾ ಅವರ ಕ್ಯಾಮರಾ ಕೈಚಳಕವಿರಲಿದೆ. ಸ್ವತಃ ಇಳಯರಾಜ ಅವರೇ ಸಂಗೀತ ಸಂಯೋಜನೆ ಮಾಡಲಿದ್ದಾರೆ.
 
ಕನೆಕ್ಟ್ ಮೀಡಿಯಾ, ಪಿಕೆ ಪ್ರೈಮ್ ಪ್ರೊಡಕ್ಷನ್ ಮತ್ತು ಮರ್ಕ್ಯುರಿ ಮೂವೀಸ್ ಈ ಚಲನಚಿತ್ರವನ್ನು ನಿರ್ಮಿಸಲು ಕೈಜೋಡಿಸಿದ್ದು, ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿಯಲ್ಲಿ ಸಿನಿಮಾ ಬಿಡುಗಡೆಗೊಳ್ಳಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ