ಟಿ ಶರ್ಟ್ ವಿವಾದ: ಕ್ಷಮೆ ಕೋರಿದ ಪ್ರಿಯಾಂಕಾ ಚೋಪ್ರಾ

ಶುಕ್ರವಾರ, 3 ಮಾರ್ಚ್ 2017 (10:47 IST)
ನಿರಾಶ್ರಿತರು ಮತ್ತು ವಲಸಿಗರ ಭಾವನೆಗಳಿಗೆ ಧಕ್ಕೆಯಾಗುವಂತಹ ವಿವಾದಾತ್ಮಕ ಬರಹವಿದ್ದ ಜಾಹೀರಾತಿನ ಟೀ ಶರ್ಟ್ ಧರಿಸಿ ವಿವಾದಕ್ಕೀಡಾಗಿದ್ದ ನಟಿ ಪ್ರಿಯಾಂಕಾ ಚೋಪ್ರಾ ಕ್ಷಮೆ ಯಾಚಿಸಿದ್ದಾರೆ.


ನಾನು ಟ್ರಾವೆಲ್ಲರ್. ನಿರಾಶ್ರಿತಳಲ್ಲ, ವಲಸಿಗಳಲ್ಲ ಅಥವಾ ಹೊರಗಿನವಳೂ ಅಲ್ಲ ಎಂಬ ಬರವಿದ್ದ ಟೀಶರ್ಟ್ ಧರಿಸಿ ಟ್ರಾವೆಲ್ಲರ್ ಇಂಡಿಯಾ ಮ್ಯಾಗಜಿನ್`ಗೆ ಬಾಲಿವುಡ್`ನ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಜಾಹೀರಾತು ನೀಡಿದ್ದರು.

ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಪ್ರಿಯಾಂಕಾ ಚೋಪ್ರಾ, ಈ ಜಾಹೀರಾತಿನಿಂದ ಜನರ ಭಾವನೆಗೆ ಧಕ್ಕೆಯುಂಟಾಗಿದ್ದಾರೆ ಕ್ಷಮೆ ಯಾಚಿಸುತ್ತೇನೆ ಎಂದಿದ್ದಾರೆ.

ಈ ಕುರಿತಂತೆ, ಅಧಿಕೃತ ಪ್ರಕಟಣೆ ಹೊರಡಿಸಿರುವ ಮ್ಯಾಗಜಿನ್, ನಮ್ಮ ಸಂದೇಶವನ್ನ ತಪ್ಪಾಗಿ ಅರ್ಥೈಸಲಾಗಿದೆ ಎಂದು ತಿಳಿಸಿದೆ.

ವೆಬ್ದುನಿಯಾವನ್ನು ಓದಿ