ಭೀಮನ ಅಮಾವಾಸ್ಯೆ ಸಂಭ್ರಮದಲ್ಲಿ ಪ್ರಿಯಾಂಕಾ ಉಪೇಂದ್ರ

ಭಾನುವಾರ, 23 ಜುಲೈ 2017 (17:01 IST)
ಭೀಮನ ಅಮಾವಾಸ್ಯೆ ಮಹಿಳೆಯರು ಆಚರಿಸುವ ಅತ್ಯಂತ ಮಹತ್ವ ಪೂರ್ಣ ಹಬ್ಬಗಳಲ್ಲೊಂದು. ದಕ್ಷಿಣದಲ್ಲಿ ಇದರ ಮಹತ್ ಹೆಚ್ಚು. ಕರ್ನಾಟಕ ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ ಹಬ್ಬ ಆಚರಿಸಲಾಗುತ್ತೆ.

ಸಾಮಾನ್ಯವಾಗು ಕುಟುಂಬದ ಪುರುಷರ ರಕ್ಷಣೆಗೆ ಮಹಿಳೆಯರು ಪಾರ್ವತಿ ಪರಮೇಶ್ವರರನ್ನ ಪ್ರಾರ್ಥಿಸುವ ಹಬ್ಬವಿದು ಎನ್ನಲಾಗುತ್ತದೆ. ವಿವಾಹಿತ ಮಹಿಳೆ ಪತಿಯ ರಕ್ಷಣೆಗೆ ಪ್ರಾರ್ಥಿಸಿದರೆ, ಅವಿವಾಹಿತ ಮಹಿಳೆಯರು ಒಳ್ಳೆಯ ಗಂಡ ಸಿಗಲಿ ಎಂದು ಪ್ರಾರ್ಥಿಸುತ್ತಾರೆ. ಭೀಮನ ಻ಮಾವಾಸ್ಯೆ ಪ್ರಯುಕ್ತ ದೇಗುಲಗಳಿಗೆ ತೆರಳಿ ಪೂಜಾ ಕೈಂಕರ್ಯಗಳನ್ನ ನಡೆಸಲಾಗುತ್ತಿದೆ.

ಇತ್ತ, ಸ್ಯಾಂಡಲ್`ವುಡ್`ನ ತಾರಾ ಜೋಡಿ ಪ್ರಿಯಾಂಕಾ ಮತ್ತು ಉಪೇಂದ್ರ ಮನೆಯಲ್ಲೂ ಭೀಮನ ಅಮಾವಾಸ್ಯೆ ಸಂಭ್ರಮ ಜೋರಾಗಿದೆ. ಉಪೇಂದ್ರ ಮತ್ತು ಪ್ರಿಯಾಂಕಾ ಇಬ್ಬರೂ ಭೀಮನ ಅಮಾವಾಸ್ಯೆ ಪೂಜೆ ನೆರವೇರಿಸಿದ್ದು, ಟ್ವಿಟ್ಟರ್`ನಲ್ಲಿ ಫೋಟೋ ಶೇರ್ ಮಾಡಿದ್ಧಾರೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Bheemamavasaye puja..nam maneli

ವೆಬ್ದುನಿಯಾವನ್ನು ಓದಿ