ಪುನೀತ್ ಸಾವಿನ ಬಳಿಕ ಪಿಆರ್ ಕೆ ಪ್ರೊಡಕ್ಷನ್ ಮಹತ್ವದ ಘೋಷಣೆ

ಶನಿವಾರ, 20 ನವೆಂಬರ್ 2021 (11:22 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕನಸಿನ ಕೂಸು ಪಿಆರ್ ಕೆ ಪ್ರೊಡಕ್ಷನ್ ಅವರ ಸಾವಿನ ಬಳಿಕ ಮಹತ್ವದ ಟ್ವೀಟ್ ಒಂದನ್ನು ಮಾಡಿದೆ.

ಪುನೀತ್ ಈ ಪ್ರೊಡಕ್ಷನ್ ಹೌಸ್ ಮೂಲಕ ಯುವ ಕಲಾವಿದರಿಗೆ, ತಂತ್ರಜ್ಞರಿಗೆ ಸಿನಿಮಾ ನಿರ್ಮಾಣ ಮಾಡಿಕೊಡುತ್ತಿದ್ದರು. ಆದರೆ ಇದೀಗ ಪುನೀತ್ ಸಾವಿನ ಬಳಿಕ ಪಿಆರ್ ಕೆ ಪ್ರೊಡಕ್ಷನ್ ಭವಿಷ್ಯ ಏನಾಗಲಿದೆ ಎಂಬ ಪ್ರಶ್ನೆಗೆ ನಿರ್ಮಾಣ ಸಂಸ್ಥೆ ಉತ್ತರ ನೀಡಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪಿಆರ್ ಕೆ ಪ್ರೊಡಕ್ಷನ್, ಪುನೀತ್ ರಾಜ್ ಕುಮಾರ್ ನೀಡಿರುವ ಪ್ರೋತ್ಸಾಹ, ಸ್ಪೂರ್ತಿಯೊಂದಿಗೆ ಪಿಆರ್ ಕೆ ಪ್ರೊಡಕ್ಷನ್ ಭವಿಷ್ಯವನ್ನು ಎದುರು ನೋಡಿತ್ತಿದೆ. ನಮ್ಮ ಪ್ರಯಾಣವನ್ನು ಪುನರಾರಂಭಿಸುತ್ತಾ, ಅವರ ಕನಸುಗಳನ್ನು ನನಸಾಗಿಸುವಲ್ಲಿ ನಿಮ್ಮ ಬೆಂಬಲ ನಿರೀಕ್ಷಿಸುತ್ತೇವೆ ಎಂದು ಟ್ವೀಟ್ ಮೂಲಕ ಹೇಳಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ