ಬೆಂಗಳೂರು: ಅನ್ ಲಾಕ್ 5 ನಿಯಮ ಜಾರಿಗೊಳಿಸಿರುವ ಕೇಂದ್ರ ಸರ್ಕಾರ ಶೇ.50 ರಷ್ಟು ಪ್ರೇಕ್ಷಕರೊಂದಿಗೆ ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ನೀಡಿದೆ.
ಚಿತ್ರಮಂದಿರ ತೆರೆಯಲು ಅವಕಾಶ ನೀಡಿರುವುದರಿಂದ ಸಿನಿಮಾ ಕೆಲಸಗಳು ನಿರಂತರವಾಗಿ ನಡೆಯಬಹುದು ಎಂದು ಚಿತ್ರರಂಗ ಖುಷಿಯಲ್ಲಿದ್ದರೆ, ಕೇವಲ 50 ಶೇಕಡಾ ಮಂದಿಗೆ ಮಾತ್ರ ಅವಕಾಶ ಎಂಬ ಬೇಸರದಲ್ಲಿ ನಿರ್ಮಾಪಕರಿದ್ದಾರೆ. ಕೊರೋನಾ ಭಯದಲ್ಲಿ ಜನ ಚಿತ್ರಮಂದಿರಕ್ಕೆ ಬರುತ್ತಾರಾ ಎನ್ನುವುದು ಒಂದು ಪ್ರಶ್ನೆಯಾದರೆ, ಬಂದರೂ ಹೌಸ್ ಫುಲ್ ಪ್ರದರ್ಶನ ನೀಡಲಾಗದು. ಅರ್ಧ ಚಿತ್ರ ಮಂದಿರ ಮಾತ್ರ ಭರ್ತಿ ಮಾಡಿ ಪ್ರದರ್ಶನ ನೀಡಬೇಕಿದೆ. ಇದರಿಂದ ಗಳಿಕೆಗೆ ಪೆಟ್ಟು ಬೀಳಬಹುದು ಎಂಬ ಆತಂಕದಲ್ಲಿ ನಿರ್ಮಾಪಕರಿದ್ದಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಇದನ್ನು ಹೊರತುಪಡಿಸಿ ಬೇರೆ ಯಾವುದೂ ದಾರಿಯೂ ಇಲ್ಲ.