ದತ್ತು ಪಡೆದ ಆನೆಯನ್ನು ಭೇಟಿ ಮಾಡಿ ಬಂದ ನಟ ಶಿವರಾಜ್ ಕುಮಾರ್
ಶುಕ್ರವಾರ, 2 ಅಕ್ಟೋಬರ್ 2020 (10:01 IST)
ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇತ್ತೀಚೆಗಷ್ಟೇ ಮೈಸೂರು ಮೃಗಾಲಯದಲ್ಲಿನ ಪಾರ್ವತಿ ಎಂಬ ಆನೆಯನ್ನು ದತ್ತು ಪಡೆದಿದ್ದರು.
ಆ ಆನೆಯನ್ನು ಸ್ವತಃ ಶಿವಣ್ಣ ಹೋಗಿ ಭೇಟಿ ಮಾಡಿ ಕೆಲ ಹೊತ್ತು ಕಳೆದು ಬಂದಿದ್ದಾರೆ. ಆನೆಯನ್ನು ದತ್ತು ತೆಗೆದುಕೊಂಡ ಬಳಿಕ ಅಭಿಮಾನಿಗಳಿಗೂ ಪ್ರಾಣಿಗಳನ್ನು ದತ್ತು ಪಡೆಯಲು ಕರೆ ನೀಡಿದ್ದರು. ಇದೀಗ ಆನೆಯೊಂದಿಗಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಶಿವಣ್ಣ ಮಾತಿಲ್ಲದ ಮೂಕ ಪ್ರಾಣಿಗಳಿಗೆ ನಾವು ಧ್ವನಿಯಾಗೋಣ ಎಂದು ಸ್ಪೂರ್ತಿದಾಯಕ ಸಂದೇಶ ಬರೆದಿದ್ದಾರೆ.