ಶೂಟಿಂಗ್ ಗಾಗಿ ತೆರಳುತ್ತಿದ್ದ ಪುನೀತ್ ರಾಜ್ ಕುಮಾರ್ ಮಾರ್ಗಮಧ್ಯದಲ್ಲಿ ಅತ್ತಿಗುಂಡಿ ಗ್ರಾಮಕ್ಕೆ ಹೋಗಿದ್ಯಾಕೆ ಗೊತ್ತಾ?
ಶುಕ್ರವಾರ, 9 ನವೆಂಬರ್ 2018 (09:16 IST)
ಬೆಂಗಳೂರು : ಶೂಟಿಂಗ್ ಗಾಗಿ ತೆರಳುತ್ತಿದ್ದ ಸ್ಯಾಂಡಲ್ ವುಡ್ ನ ಸ್ಟಾರ್ ನಟ ಪುನೀತ್ ರಾಜ್ ಕುಮಾರ್ ಅವರು ಮಾರ್ಗಮಧ್ಯದಲ್ಲಿ ಬಂದ ಅತ್ತಿಗುಂಡಿ ಗ್ರಾಮದಲ್ಲಿ ಇಳಿದು ಇಡೀ ಗ್ರಾಮವನ್ನು ಸುತ್ತಿದ್ದಾರಂತೆ.
ಪುನೀತ್ ಅವರು ಈರೀತಿ ಮಾಡಲು ಕಾರಣವೇನು? ಅವರಿಗೂ ಆ ಗ್ರಾಮಕ್ಕೂ ಏನು ನಂಟು? ಎಂಬ ಪ್ರಶ್ನೆ ಹಲವರಲ್ಲಿ ಮೂಡಿರಬಹುದು. ಇದಕ್ಕೆ ಕಾರಣ ಇಲ್ಲಿದೆ ನೋಡಿ. ಪುನೀತ್ ಬಾಲನಟನಾಗಿ ನಟಿಸಿದ 1985ರಲ್ಲಿ ಬಿಡುಗಡೆಗೊಂಡ ನ್ಯಾಷನಲ್ ಅವಾರ್ಡ್ ಪಡೆದ ‘ಬೆಟ್ಟದ ಹೂ’ ಚಿತ್ರದ ಶೂಟಿಂಗ್ ನಡೆದಿದ್ದು ಚಿಕ್ಕಮಗಳೂರಿನ ಅತ್ತಿಗುಂಡಿ ಎನ್ನುವ ಈ ಪುಟ್ಟ ಗ್ರಾಮದಲ್ಲಿ.
ಆದಕಾರಣ ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿಲು ಕಾರಿನಿಂದ ಕೆಳಗಿಳಿದು ಪುಟ್ಟ ಮಕ್ಕಳಂತೆ ಇಡೀ ಗ್ರಾಮದಲ್ಲಿ ಸುತ್ತಾಡಿ, ತಾವು ಶೂಟಿಂಗ್ ನಡೆದ ಸ್ಥಳಗಳನ್ನು ನೋಡಿ , ಆ ಗ್ರಾಮದ ಜನರ ಜತೆ ಮಾತನಾಡಿ, ಕಳೆದು ಹೋದ ಸುಂದರ ನೆನಪುಗಳನ್ನು ನೆನೆದು ಸಂತಸ ಪಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.