ಫೆಂಗ್ ಶೂಯಿ ಪ್ರಕಾರ ಮನೆಯ ಸ್ನಾನದ ಕೋಣೆಯ ವಾಸ್ತು ಹೀಗಿರಲಿ

ಗುರುವಾರ, 8 ನವೆಂಬರ್ 2018 (15:04 IST)
ಬೆಂಗಳೂರು : ವಾಸ್ತುಶಾಸ್ತ್ರದಲ್ಲಿ ಮನೆಗೆ ಮಾತ್ರವಲ್ಲ ಮನೆಯ ಸ್ನಾನದ ಕೋಣೆ ಹಾಗೂ ಅಲ್ಲಿ ಬಳಸುವ ವಸ್ತುಗಳಿಗೂ ವಾಸ್ತು ಅನ್ವಯವಾಗುತ್ತದೆ. ಸ್ನಾನದ ಕೋಣೆಯನ್ನು ನಮಗಿಷ್ಟ ಬಂದ ಹಾಗೆ ಇಡುವಂತಿಲ್ಲ. ಅದಕ್ಕೂ ಕೂಡ ಕೆಲವು ವಾಸ್ತು ಶಾಸ್ತ್ರವಿದೆ.

ಫೆಂಗ್ ಶೂಯಿ ಪ್ರಕಾರ ಮನೆಯ ಮನೆಯ ಕೇಂದ್ರ ಸ್ಥಾನದಲ್ಲಿ ಸ್ನಾನ ಗೃಹ ಇರಬಾರದು. ಈಶಾನ್ಯ ದಿಕ್ಕಿನಲ್ಲಿ ಸ್ನಾನ ಗೃಹವಿದ್ದರೆ ಮಕ್ಕಳ ಓದಿನ ಮೇಲೆ ಪ್ರಭಾವ ಬೀರುತ್ತದೆ. ಅಲ್ಲದೆ ಮನೆಯಲ್ಲಿ ವಾಸವಾಗಿರುವವರ ಮೇಲೆ ಮಾನಸಿಕ ಪ್ರಭಾವ ಬೀರುತ್ತದೆ. ದಕ್ಷಿಣ, ಪಶ್ಚಿಮ ಮತ್ತು ಪೂರ್ವ ದಿಕ್ಕು ಸ್ನಾನ ಗೃಹಕ್ಕೆ ಉತ್ತಮ.

 

ಹಾಗೇ ಫಿಂಗ್ ಶೂಯಿ ಪ್ರಕಾರ ಸ್ನಾನ ಗೃಹದಲ್ಲಿ ನೀಲಿ ಬಣ್ಣದ ಬಕೆಟ್ ಇಡುವುದು ಶುಭ. ಒಂದು ವೇಳೆ ಬೇರೆ ಬಣ್ಣದ ಬಕೆಟ್ ಇದ್ದಲ್ಲಿ ಆತಂಕಪಡಬೇಕಾಗಿಲ್ಲ ಅದನ್ನೇ ಬಳಸಬಹುದು. ಆದ್ರೆ ಸದಾ ಬಕೆಟ್ ನಲ್ಲಿ ನೀರಿರುವಂತೆ ನೋಡಿಕೊಳ್ಳಿ. ಇದು ಜೀವನದಲ್ಲಿ ಸುಖ-ಸಂತೋಷ ನೆಲೆಸಲು ಸಹಕಾರಿ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ