ಗಂಧದ ಗುಡಿ ಟೀಸರ್ ನಲ್ಲಿ ‘ಪವರ್ ಸ್ಟಾರ್’ ಬಿರುದು ತೆಗೆಯಲು ಹೇಳಿದ್ದ ಪುನೀತ್
ಗಂಧದ ಗುಡಿ ಡಾಕ್ಯುಮೆಂಟರಿಯನ್ನು ಪುನೀತ್ ರಾಜ್ ಕುಮಾರ್-ಅಮೋಘವರ್ಷ ಜೊತೆಯಾಗಿ ಮಾಡಿದ್ದರು. ಇದರ ಟೀಸರ್ ತಯಾರಿಸಿ ಪುನೀತ್ ರಾಜ್ ಕುಮಾರ್ ಗೆ ತೋರಿಸಿದಾಗ ಪುನೀತ್ ಅದರಲ್ಲಿ ಒಂದು ಸಣ್ಣ ಆಕ್ಷೇಪ ಹೇಳಿದ್ದರಂತೆ.
ಟೀಸರ್ ನಲ್ಲಿ ಪುನೀತ್ ಹೆಸರಿನ ಮೊದಲು ಪವರ್ ಸ್ಟಾರ್ ಎಂದು ಹಾಕಲಾಗಿತ್ತು. ಇದನ್ನು ನೋಡಿ ಪವರ್ ಸ್ಟಾರ್ ಕೈ ಬಿಟ್ಟು ಕೇವಲ ಪುನೀತ್ ರಾಜ್ ಕುಮಾರ್ ಎಂದು ಹೆಸರಿಡಲು ಅಪ್ಪು ಸೂಚಿಸಿದ್ದರಂತೆ. ಹೀಗಾಗಿ ಟೀಸರ್ ನಲ್ಲೂ ಕೇವಲ ಪುನೀತ್ ರಾಜ್ ಕುಮಾರ್ ಎಂದೇ ಉಲ್ಲೇಖಿಸಲಾಗಿದೆ. ಇದು ಅವರ ವಿನಯತೆಗೆ ಸಾಕ್ಷಿ ಎಂದು ಅಮೋಘವರ್ಷ ಕೊಂಡಾಡಿದ್ದಾರೆ.