ಪುನೀತ್ ಗೆ ಗೌರವ ಸಲ್ಲಿಸಿ ಆರ್ ಸಿಬಿ ಮೇಲೆ ಕಣ್ಣಿಟ್ಟಿದ್ದಾರಾ ಡೇವಿಡ್ ವಾರ್ನರ್?
ಇದುವರೆಗೆ ಹೈದರಾಬಾದ್ ತಂಡದಲ್ಲಿದ್ದ ವಾರ್ನರ್ ಈ ಬಾರಿ ಮೆಗಾ ಹರಾಜಿಗೊಳಪಡಲಿದ್ದಾರೆ. ಹೀಗಾಗಿ ಅವರು ಪುನೀತ್ ಗೆ ಗೌರವ ಸಲ್ಲಿಸಿ ಕನ್ನಡಿಗರ ಮನಗೆದ್ದ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರುವ ಇರಾದೆಯಿದೆ ಎನ್ನಲಾಗಿದೆ.
ಅದಕ್ಕೆ ತಕ್ಕಂತೆ ವಾರ್ನರ್ ರ ಪೋಸ್ಟ್ ಗೆ ಆರ್ ಸಿಬಿ ಫ್ಯಾನ್ಸ್ ಸಾಕಷ್ಟು ಸಂಖ್ಯೆಯಲ್ಲಿ ಕಾಮೆಂಟ್ ಮಾಡಿ ಮುಂದಿನ ಆವೃತ್ತಿಯಲ್ಲಿ ಆರ್ ಸಿಬಿಗೆ ಬನ್ನಿ ಎಂದು ಕೇಳಿಕೊಂಡಿದ್ದಾರೆ. ಹೀಗಾಗಿ ಮುಂದಿನ ಸೀಸನ್ ನಲ್ಲಿ ವಾರ್ನರ್ ಆರ್ ಸಿಬಿ ಬಂದರೂ ಅಚ್ಚರಿಯಿಲ್ಲ.