ಪುನೀತ್ ರಾಜ್ ಕುಮಾರ್ ಗೆ ಮರಣೋತ್ತರ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರಧಾನ
ಸಿನಿಮಾ ಮತ್ತು ಸಾಮಾಜಿಕ ಕ್ಷೇತ್ರದಲ್ಲಿನ ಸೇವೆ ಗಮನಿಸಿ ಮೈಸೂರು ವಿವಿ 102 ನೇ ಘಟಿಕೋತ್ಸವದಲ್ಲಿ ಪುನೀತ್ ಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಿತು.
ಈ ವೇಳೆ ರಾಘವೇಂದ್ರ ರಾಜ್ ಕುಮಾರ್, ಪತ್ನಿ ಮಂಗಳಾ, ಪುನೀತ್ ಅಕ್ಕಂದಿರು, ಅಕ್ಕನ ಮಗಳು ಧನ್ಯಾ ರಾಮ್ ಕುಮಾರ್ ಸೇರಿದಂತೆ ಕುಟುಂಬಸ್ಥರು ಉಪಸ್ಥಿತರಿದ್ದರು. ವೇದಿಕೆಯಲ್ಲಿ ಅಶ್ವಿನಿ ಪ್ರಶಸ್ತಿ ಸ್ವೀಕರಿಸುತ್ತಿದ್ದರೆ ಇತ್ತ ಕೆಳಗೆ ಕುಳಿತಿದ್ದ ಡಾ.ರಾಜ್ ಕುಟುಂಬಸ್ಥರು ಭಾವುಕರಾದರು.