ಲಕ್ಕಿಮ್ಯಾನ್ ರಿಲೀಸ್: ತೆರೆ ಮೇಲೆ ಅಪ್ಪು ಬರುತ್ತಿದ್ದಂತೇ ಹುಚ್ಚೆದ್ದು ಕುಣಿದ ಅಭಿಮಾನಿಗಳು

ಶುಕ್ರವಾರ, 9 ಸೆಪ್ಟಂಬರ್ 2022 (10:38 IST)
ಬೆಂಗಳೂರು: ಡಾರ್ಲಿಂಗ್ ಕೃಷ್ಣ ನಾಯಕರಾಗಿರುವ ಲಕ್ಕಿಮ್ಯಾನ್ ಸಿನಿಮಾ ಇಂದು ರಾಜ್ಯಾದ್ಯಂತ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಅತಿಥಿ ಪಾತ್ರ ಮಾಡಿದ್ದಾರೆ.

ಈ ಕಾರಣಕ್ಕೇ ಮಧ‍್ಯರಾತ್ರಿಯಿಂದಲೇ ಅಪ್ಪು ಅಭಿಮಾನಿಗಳು ಥಿಯೇಟರ್ ಗೆ ಲಗ್ಗೆಯಿಟ್ಟಿದ್ದರು. ಪುನೀತ್ ಈ ಸಿನಿಮಾದಲ್ಲಿ ಇದ್ದಾರೆಂಬ ಕಾರಣಕ್ಕೇ ಸಿನಿಮಾ ಬಗ್ಗೆ ಭಾರೀ ಕ್ರೇಜ್ ಇದೆ.

ಹೀಗಾಗಿ ಪುನೀತ್ ರನ್ನು ಕೊನೆಯ ಬಾರಿಗೆ ತೆರೆ ಮೇಲೆ ಸ್ವಾಗತಿಸಲು ಜನ ಸಿದ್ಧರಾಗಿಯೇ ಥಿಯೇಟರ್ ಗೆ ಬಂದಿದ್ದರು. ಪುನೀತ್ ಹೆಸರು ಕಾಣುತ್ತಿದ್ದಂತೇ ಪಟಾಕಿ ಸಿಡಿಸಿ, ಮೊಬೈಲ್ ಬೆಳಕು ಬೀರಿ, ಅಪ್ಪು ಅಪ್ಪು ಎಂದು ಕುಣಿದು ಕುಪ್ಪಳಿಸಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ