ಪುನೀತ್ ಜೊತೆಗೇ ಮತ್ತೆ ಸಿನಿಮಾಗೆ ರಿ ಎಂಟ್ರಿ ಕೊಡಲು ಪ್ಲ್ಯಾನ್ ಮಾಡಿದ್ದ ರಮ್ಯಾ!

ಶುಕ್ರವಾರ, 9 ಸೆಪ್ಟಂಬರ್ 2022 (09:30 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಭಿ ಸಿನಿಮಾ ಮೂಲಕ ರಮ್ಯಾ ಸ್ಯಾಂಡಲ್ ವುಡ್ ಗೆ ಕಾಲಿಟ್ಟಿದ್ದರು. ಬಳಿಕ ಸ್ಯಾಂಡಲ್ ವುಡ್ ಕ್ವೀನ್ ಆಗಿ ಮೆರೆದಿದ್ದು ಎಲ್ಲರಿಗೂ ಗೊತ್ತೇ ಇದೆ.

ಇದಾದ ಬಳಿಕ ತೆರೆಮರೆಗೆ ಸರಿದಿದ್ದ ರಮ್ಯಾ ಈಗ ಮತ್ತೆ ಸಿನಿಮಾ ಮಾಡಲು ಹೊರಟಿದ್ದಾರೆ. ಆದರೆ ಮತ್ತೆ ಪುನೀತ್ ಜೊತೆಗೇ ಸಿನಿಮಾ ಮಾಡಲು ರಮ್ಯಾ ಪ್ಲ್ಯಾನ್ ಮಾಡಿದ್ದರಂತೆ.

ಅಣ್ಣಾವ್ರು ವರನಟ ಡಾ.ರಾಜ್ ಕುಮಾರ್-ಲಕ್ಷ್ಮೀ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ ನಾ ನಿನ್ನ ಮರೆಯಲಾರೆ ಸಿನಿಮಾವನ್ನು ರಿ ಕ್ರಿಯೇಟ್ ಮಾಡಲು ಪುನೀತ್ ಯೋಜನೆ ಹಾಕಿದ್ದರಂತೆ. ಈ ಸಿನಿಮಾದಲ್ಲಿ ಲಕ್ಷ್ಮಿ ಮಾಡಿದ್ದ ಪಾತ್ರವನ್ನು ರಮ್ಯಾ ಮಾಡುವುದು ಮತ್ತು ಅಣ್ಣಾವ್ರ ಪಾತ್ರವನ್ನು ಪುನೀತ್ ಮಾಡುವುದು ಎಂದು ಇಬ್ಬರೂ ಮಾತಾಡಿಕೊಂಡಿದ್ದರಂತೆ. ಇದನ್ನು ಸ್ವತಃ ರಮ್ಯಾ ಬಹಿರಂಗಪಡಿಸಿದ್ದಾರೆ. ಆದರೆ ಕೊನೆಗೂ ಆ ಆಸೆ ಈಡೇರಲೇ ಇಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ