ಯುವರತ್ನ ಶೂಟಿಂಗ್ ನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಉಡುಗೊರೆಯ ಸುರಿಮಳೆ

ಸೋಮವಾರ, 17 ಜೂನ್ 2019 (09:01 IST)
ಬೆಂಗಳೂರು: ಮೈಸೂರಿನಲ್ಲಿ ಯುವರತ್ನ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನೋಡಲು ಅಭಿಮಾನಿಗಳ ದಂಡೇ ಹರಿದುಬರುತ್ತಿದೆ.


ಮೊನ್ನೆಯಷ್ಟೇ ನವಜೋಡಿಯೊಂದು ಮದುವೆ ಮಂಟಪದಿಂದ ನೇರವಾಗಿ ಪುನೀತ್ ಬಳಿ ಬಂದು ಆಶೀರ್ವಾದ ಪಡೆದಿದ್ದರು. ಅದಲ್ಲದೆ, ಹಲವರು ಪುನೀತ್ ಭೆಟಿಗೆ ಬರುತ್ತಲೇ ಇದ್ದಾರೆ.

ಇದೀಗ ಮಹಿಳೆಯರ ಗುಂಪೊಂದು ಪುನೀತ್ ಗೆ  ಕಲಾಕೃತಿ, ಫೋಟೋಗಳ ಉಡುಗೊರೆ ನೀಡಿ ತಮ್ಮ ಅಭಿಮಾನ ಪ್ರದರ್ಶಿಸಿದ್ದಾರೆ. ಮಹಿಳೆಯರ ಅಭಿಮಾನ ನೋಡಿ ಪುನೀತ್ ಬೆರಗಾಗಿದ್ದು, ಅವರು ಕೊಟ್ಟ ಉಡುಗೊರೆಗಳು, ಸನ್ಮಾನಗಳನ್ನು ಪ್ರೀತಿಯಿಂದಲೇ ಸ್ವೀಕರಿಸಿ ಅವರ ಜತೆಗೆ ಕುಶಲೋಪರಿ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ