ಅಪ್ಪಂದಿರ ದಿನ ನಟಿ ಹರಿಪ್ರಿಯಾಗೆ ಅಷ್ಟೊಂದು ಬೇಸರವಾಗಿದ್ದೇಕೆ?

ಸೋಮವಾರ, 17 ಜೂನ್ 2019 (08:58 IST)
ಬೆಂಗಳೂರು: ಅಪ್ಪಂದಿರ ದಿನ ಎಂಬ ಕಾರಣಕ್ಕೆ ನಿನ್ನೆ ಎಲ್ಲಾ ಸೆಲೆಬ್ರಿಟಿಗಳೂ ತಮ್ಮ ಅಪ್ಪಂದಿರ ಜತೆಗಿನ ವಿಶೇಷ ಕ್ಷಣಗಳನ್ನು ಫೋಟೋ ಸಮೇತ ಪ್ರಕಟಿಸುತ್ತಿದ್ದರೆ ನಟಿ ಹರಿಪ್ರಿಯಾ ಬೇಸರದಿಂದಲೇ ಟ್ವೀಟ್ ಮಾಡಿದ್ದಾರೆ.


ಎಲ್ಲರೂ ಅಪ್ಪಂದಿರ ಜತೆಗಿನ ಇತ್ತೀಚೆಗಿನ ಫೋಟೋಗಳನ್ನು ಹಾಕುತ್ತಿದ್ದರೆ ತನಗೆ ಮಾತ್ರ ಆ ಭಾಗ್ಯವಿಲ್ಲ ಎಂದು ಹರಿಪ್ರಿಯಾ ಬೇಸರಿಸಿಕೊಂಡಿದ್ದಾರೆ.

‘ಎಲ್ಲರೂ ಅಪ್ಪಂದಿರ ದಿನ ಎಂದು ಇತ್ತೀಚೆಗಿನ ಫೋಟೋ ಹಾಕುತ್ತಿದ್ದಾರೆ. ನನಗೆ ಆ ಭಾಗ್ಯವಿಲ್ಲ. ಅದಕ್ಕೇ ಹಳೇ ಫೋಟೋ ಹಾಕುತ್ತಿದ್ದೇನೆ. ಅಪ್ಪಾ ನೀವು ಈಗ ನನ್ನ ಜತೆಗಿರಬೇಕಿತ್ತು, ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ’ ಎಂದು ಹರಿಪ್ರಿಯಾ ತಮ್ಮ ಕಳೆದುಹೋದ ಅಪ್ಪನ ಜತೆಗಿನ ಹಳೆಯ ಫೋಟೋವನ್ನು ಪ್ರಕಟಿಸಿ ಬೇಸರ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ